ನವದೆಹಲಿ, ಮೇ.03 (DaijiworldNews/PY): "ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 60 ಲಕ್ಷ ಡೋಸ್ಗಳಷ್ಟು ಲಸಿಕೆಯನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡಲಾಗುವುದು" ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
"ಭಾರತ ಸರ್ಕಾರ ಇಲ್ಲಿಯವರೆಗೂ ಸುಮಾರು 16.54 ಕೋಟಿ ಲಸಿಕೆ ಡೋಸ್ಗಳನ್ನು ಕೇಂದ್ರಾಡಳಿತ/ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡಿದೆ" ಎಂದು ಆರೋಗ್ಯ ಸಚಿವಾಲಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
"ಇದರಲ್ಲಿ ಸುಮಾರು 15,79,21,537 ಗಳಷ್ಟು ಲಸಿಕೆ ಡೋಸ್ಗಳನ್ನು ಸೋಮವಾರ ಬೆಳಗ್ಗೆವರೆಗೂ ನೀಡಲಾಗಿದೆ. 75 ಲಕ್ಷಗಳಷ್ಟು ಡೋಸ್ಗಳು ಬಳಕೆಯಾಗದೇ ಉಳಿದಿವೆ. ಇದಲ್ಲದೇ, 59 ಲಕ್ಷ ಡೋಸ್ಗಳನ್ನು ಇನ್ನು ಮೂರು ದಿನಗಳಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡಲಾಗುತ್ತದೆ" ಎಂದು ತಿಳಿಸಿದೆ.