ನವದೆಹಲಿ, ಮೇ. 03 (DaijiworldNews/HR): ಭಾರತದಲ್ಲಿ ಆಕ್ಸಿಜನ್, ಬೆಡ್ ಗಳ ಕೊರತೆ ಎದುರಿಸುತ್ತಿರುವ ನಡುವೆಯೇ, ಜುಲೈವರೆಗೆ ಭಾರತದಲ್ಲಿ ಲಸಿಕೆ ಕೊರತೆಯನ್ನು ಎದುರಿಸಬೇಕಾಗಲಿದೆ ಎಂದು ಸೀರಂ ಇನ್ಸ್ ಟಿಟ್ಯೂಟ್ (ಎಸ್ ಐಐ) ಮುಖ್ಯಸ್ಥ ಆದರ್ ಪೂನವಾಲ್ಲಾ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸೀರಂ ಮುಖ್ಯಸ್ಥ ಆದರ್ ಪೂನವಾಲ್ಲಾ, "ಕೊರೊನಾ ಲಸಿಕೆಯ ಉತ್ಪಾದನೆಯನ್ನು ಜುಲೈ ತಿಂಗಳಿನಿಂದ ಹೆಚ್ಚಳ ಮಾಡುವ ನಿರೀಕ್ಷೆ ಇದೆ" ಎಂದು ತಿಳಿಸಿದ್ದಾರೆ.
ಇನ್ನು ದೇಶದಲ್ಲಿ ಕಳೆದ ಕೆಲವು ದಿನಗಳಿಂದ 3ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಭಾರತದ ಸದ್ಯದ ಕೊರೊನಾ ಪರಿಸ್ಥಿತಿ ಜಗತ್ತಿನ ಇತರ ದೇಶಗಳಿಗಿಂತ ತುಂಬಾ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ಮೇ 1ರಂದು ದೇಶಾದ್ಯಂತ ಮೂರನೇ ಹಂತದ ಲಸಿಕೆ ಅಭಿಯಾನ ಆರಂಭವಾದ ಎರಡು ದಿನಗಳ ನಂತರ ಪೂನವಾಲ್ಲಾ ಈ ಹೇಳಿಕೆಯನ್ನು ನೀಡಿದ್ದಾರೆ.