ಚಾಮರಾಜನಗರ, ಮೇ. 03 (DaijiworldNews/HR): ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 20ಕ್ಕೂ ಅಧಿಕ ಮಂದಿ ಆಮ್ಲಜನಕ ಇಲ್ಲದೆ ಮೃತಪಟ್ಟಿರುವುದು, ಕೊಲೆಯೋ ಅಥವಾ ಸಾವೋ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಇದು ಸಾವೋ ಅಥವಾ ಕೊಲೆಯೋ ಎಂದು ಪ್ರಶ್ನೆ ಮಾಡಿದ್ದು, ವ್ಯವಸ್ಥೆ ಎಚ್ಚರಗೊಳ್ಳುವ ಮೊದಲು ಇನ್ನು ಇಂತಹ ಎಷ್ಟು ಸಾವು ನೋವುಗಳು ಸಂಭವಿಸುತ್ತವೋ ಎಂದು ಹೇಳಿರುವ ಅವರು, ಸಾವನ್ನಪ್ಪಿರುವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಇದೇ ವಿಚಾರವಾಗಿ ರಾಜ್ಯದಲ್ಲಿ ಅನೇಕ ಚರ್ಚೆಗಳು ನಡೆಯುತ್ತಿದ್ದು, ನಾಳೆ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿನ ಆಕ್ಸಿಜನ್ ಕೊರತೆಯ ಕುರಿತಂತೆ ಚರ್ಚಿಸಲು ತುರ್ತು ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ.
ಇನ್ನು ಡಿ.ಕೆ ಶಿವಕುಮಾರ್ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು, "ಬಿಜೆಪಿ ಸರ್ಕಾರ ಪ್ರಚಾರ ಪ್ರಿಯ ಸರ್ಕಾರ. ಸರ್ಕಾರಕ್ಕೆ ಆಕ್ಸಿಜನ್ ಕೊಡೋದಕ್ಕೂ ಆಗಲ್ಲ ಅಂದ್ರೆ ಏನು ಅರ್ಥ" ಎಂದು ಪ್ರಶ್ನೆ ಮಾಡಿದ್ದಾರೆ.