ಲಕ್ನೋ, ಮೇ. 03 (DaijiworldNews/HR): ಆಸ್ಪತ್ರೆಯಲ್ಲಿ 53 ವರ್ಷದ ಮಹಿಳೆಯೊಬ್ಬರು ಸತ್ತಿದ್ದಾರೆಂದು ವೈದ್ಯರು ತಿಳಿದ ಬಳಿಕ ದೇಹವನ್ನು ಮನೆಗೆ ಕರೆದೊಯ್ಯುವಾಗ ಮಹಿಳೆ ಉಸಿರಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಈ ಘಟನೆ ರವಿವಾರ ನಡೆದಿದ್ದು, ಮಹಿಳೆ ಸತ್ತಿದ್ದಾರೆ ಆಕೆಯನ್ನು ಮನೆಗೆ ಕರೆದುಕೊಂದು ಹೋಗಿ ಎಂದು ವೈದ್ಯರು ತಿಳಿಸಿದ್ದರು.
ಇಂದಿರಾನಗರದಲ್ಲಿ ವಾಸಿಸುವ ಕುಟುಂಬವು ಚಿತ್ರೀಕರಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಮನೆಯಲ್ಲಿ ರೋಗಿಯನ್ನು ಆಕ್ಸಿಜನ್ ಇಟ್ಟು ಉಸಿರಾಟಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವುದು ಕಮ್ಡು ಬಂದಿದ್ದು, ಅದರಲ್ಲಿ ಆಕೆ ಇನ್ನು ಜೀವಂತವಾಗಿರುವುದು ಕಾಣುತ್ತದೆ.
ಈ ಕುರಿತು ರೋಗಿಯ ಮಗ ಸುನೀಲ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡು, "ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನನ್ನ ತಾಯಿ ರವಿವಾರ ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದು, ಮನೆಗೆ ಕರೆತಂದೆವು, ಆದರೆ ಆಕೆಯ ಹೃದಯ ಇನ್ನೂ ಬಡಿಯುತ್ತಿರುವುದನ್ನು ಗಮನಿಸಿದ ನಂತರ ನಾವು ಆಮ್ಲಜನಕದ ಸಹಾಯದೊಂದಿಗೆ ಮತ್ತೆ ಖಾಸಗಿ ಆಸ್ಪತ್ರೆಗೆ ತಲುಪಿಸಿದೆವು ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ನಿಧನರಾದರು" ಎಂದು ತಿಳಿಸಿದ್ದಾರೆ.
ಇನ್ನು "ಕುಟುಂಬಸ್ಥರ ಆರೋಪವನ್ನು ನಿರಾಕರಿಸಿದ ಆಸ್ಪತ್ರೆಯ ವಕ್ತಾರರು ರೋಗಿಯ ಇಸಿಜಿ ವರದಿಯನ್ನು ತೋರಿಸಿ ಆಕೆ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಆ ನಂತರ ಬಿಡುಗಡೆ ಮಾಡಿದ್ದೇವೆ. ಅವರಿಗೆ ಎಲ್ಲಾ ಅಗತ್ಯ ಚಿಕಿತ್ಸೆಯನ್ನು ನೀಡಲಾಯಿತ್ತು, ಆದರೆ ಅವರು ಹೃದಯಾಘಾತದಿಂದ ನಿಧನರಾದರು" ಎಂದು ಅವರು ಹೇಳಿದ್ದಾರೆ.