ಬೆಂಗಳೂರು, ಮೇ.03 (DaijiworldNews/PY): ಸರ್ಕಾರಕ್ಕೆ ಎಚ್ಚರಿಕೆ ಮಾತುಗಳು ಹಾಗೂ ಸಲಹೆಗಳು 'ಕೋಣದ ಮುಂದೆ ಕಿನ್ನೂರಿ ನುಡಿಸಿದಂತೆ' ಎಂದು ಸರ್ಕಾರದ ವಿರುದ್ದ ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಸೋಂಕಿತರು ಸಾಯುತ್ತಿರುವುದು ಕರೋನಾದ ಪ್ರಭಾವದಿಂದಲ್ಲ, ಸರ್ಕಾರದ ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆಯಿಂದ. ಹಾಗಾಗಿ ಇವೆಲ್ಲವೂ ಬಿಜೆಪಿ ಸರ್ಕಾರ ನಡೆಸುತ್ತಿರುವ ಮಾರಣಹೋಮ ಎನ್ನಬಹುದು" ಎಂದಿದೆ.
ಈ ಸರ್ಕಾರಕ್ಕೆ ಎಚ್ಚರಿಕೆ ಮಾತುಗಳು ಹಾಗೂ ಸಲಹೆಗಳು 'ಕೋಣದ ಮುಂದೆ ಕಿನ್ನೂರಿ ನುಡಿಸಿದಂತೆ' ಆಕ್ಸಿಜನ್, ಬೆಡ್, ವೆಂಟಿಲೇಟರ್ಗಳ ಕೊರತೆಯ ಕೂಗು ಕೇಳಿಬರುತ್ತಾ ಒಂದು ತಿಂಗಳಾಯಿತು ಆದರೂ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳದೆ ಲಾಕ್ಡೌನ್ ಒಂದೇ ಕರೋನಾಗೆ ಮದ್ದು ಎಂದು ನಂಬಿ ಕುಳಿತಂತಿದೆ. ಸರ್ಕಾರಕ್ಕೆ ಜೀವವಿಲ್ಲದ ಕಾರಣ ಜನರ ಜೀವ ಹೋಗುತ್ತಿದೆ ಎಂದು ಆರೋಪಿಸಿದೆ.
"ಆಪರೇಷನ್ ಕಮಲ ಎನ್ನುವ ಅನೈತಿಕತೆಯನ್ನ ಸಂಭ್ರಮಿಸುವ ಬಿಜೆಪಿ ಪಕ್ಷಕ್ಕೆ ಲಜ್ಜೆ ಎಂಬುದೇ ಇಲ್ಲ.ತಜ್ಞರ, ವಿಜ್ಞಾನಿಗಳ ಎಚ್ಚರಿಕೆಯನ್ನು ಕಡೆಗಣಿಸಿ ಚುನಾವಣೆಯನ್ನೇ ಮುಖ್ಯವಾಗಿಸಿಕೊಂಡು ಕರೋನಾ ನಡುವೆಯೇ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶವಾಸಿಗಳನ್ನು ಬಲಿ ಕೊಡುತ್ತಿರುವುದಕ್ಕೆ ಕೊಂಚವೂ ಪಾಪಪ್ರಜ್ಞೆ ಕಾಡುತ್ತಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದೆ.