ಕೊಲ್ಲಮ್, ಮೇ. 03 (DaijiworldNews/HR): ಕೇರಳ ಕಾಂಗ್ರೆಸ್ನ ಸ್ಥಾಪಕ ಹಾಗೂ ಮಾಜಿ ಸಚಿವ ಆರ್.ಬಾಲಕೃಷ್ಣ ಪಿಳ್ಳೈ(86 ) ಇಂದು ನಸುಕಿನ ಜಾವ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಉಸಿರಾಟದ ತೊಂದರೆಯಿಂ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕೃಷ್ಣ ಪಿಳ್ಳೈ ಅವರ ಅನಾರೋಗ್ಯ ಮತ್ತಷ್ಟು ಹದಗೆಥಥು ಬಳಿಕ ತಿರುವನಂತಪುರದ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಇನ್ನು ಬಾಲಕೃಷ್ಣ ಪಿಳ್ಳೈ ಅವರ ಪುತ್ರ, ಮಾಜಿ ಸಚಿವ ಕೆ ಬಿ ಗಣೇಶ್ ಕುಮಾರ್ ಪತನಪುರಂ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿನ್ನೆ ಗೆಲುವು ಸಾಧಿಸಿದ್ದರು.
1935ರ ಮಾರ್ಚ್ 8ರಂದು ಜನಿಸಿದ್ದ ಬಾಲಕೃಷ್ಣ ಪಿಳ್ಳೈ ಕಾಂಗ್ರೆಸ್ ಮೂಲಕವೇ ರಾಜಕೀಯದಲ್ಲಿ ಸಕ್ರಿಯರಾಗಿದದು, ನಂತರದ ದಿನಗಳಲ್ಲಿ ಕೇರಳ ಕಾಂಗ್ರೆಸ್ಗೆ ಸೇರಿ ಅಲ್ಲಿ ತಮ್ಮದೇ ಪಕ್ಷ ಸ್ಥಾಪಿಸಿದ್ದರು.