ಭೋಪಾಲ್, ಮೇ 03 (DaijiworldNews/MB) : ಎಲ್ಲಾ ಮಾನ್ಯತೆ ಪಡೆದ ಪತ್ರಕರ್ತರನ್ನು ಕೊರೊನಾ ಮುಂಚೂಣಿ ಕಾರ್ಯಕರ್ತರು ಎಂದು ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ.
ರವಿವಾರವಷ್ಟೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪತ್ರಕರ್ತರನ್ನು ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಎಂದು ಘೋಷಣೆ ಮಾಡಿದ್ದರು. ತಡೆರಹಿತ ಸುದ್ದಿ ನೀಡುವ ಮೂಲಕ ಪತ್ರಕರ್ತರು ರಾಜ್ಯಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಸಂಬಂಧಿಸಿದ ವಿಚಾರಗಳ ಬಗ್ಗೆ ಅವರು ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಅವರು ಕೊರೊನಾ ವಿರುದ್ದದ ಯುದ್ದಕ್ಕೆ ಬೆಂಬಲ ನೀಡುತ್ತಿದ್ದಾರೆ. ಅವರು ಕೊರೊನಾ ಯೋಧರು ಎಂದು ಹೇಳಿದ್ದರು.
ಸೋಮವಾರ ಮಧ್ಯಪ್ರದೇಶ ಸರ್ಕಾರವೂ ಪತ್ರಕರ್ತರನ್ನು ಕೊರೊನಾ ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಿದೆ. ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ''ಮಧ್ಯಪ್ರದೇಶ ಸರ್ಕಾರ ಎಲ್ಲಾ ಮಾನ್ಯತೆ ಪಡೆದ ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರೆಂದು ಘೋಷಿಸುತ್ತದೆ'' ಎಂದು ತಿಳಿಸಿದ್ದಾರೆ.