ನವದೆಹಲಿ, ಮೇ 03 (DaijiworldNews/MB) : ''ರಾಜಕಾರಣಕ್ಕೆ ಜೈ ಶ್ರೀರಾಮ್ ಬಳಕೆ ಮಾಡಿದ ಕಾರಣದಿಂದಲ್ಲೇ ಬಂಗಾಳದಲ್ಲಿ ಬಿಜೆಪಿ ಸೋಲು ಕಂಡಿದೆ'' ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಸೋಮವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಟಿಎಂಸಿ ಹಾಗೂ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಭಿನಂದಿಸಿ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.
''ಪಶ್ಚಿಮ ಬಂಗಾಳದಲ್ಲಿ ಯಾರು ಸೋತರು, ಅವರು ದುರಹಂಕಾರ, ಹಣ ಬಲ, ಜೈ ಶ್ರೀ ರಾಮ ಘೋಷಣೆ ರಾಜಕೀಯಕ್ಕಾಗಿ ಬಳಸಿದ ಕಾರಣ, ವಿಭಜನೆಯ ಸಿದ್ದಾಂತ ಮತ್ತು ಚುನಾವಣಾ ಆಯೋಗ ಬಳಕೆಯಿಂದ ಸೋಲು ಕಂಡಿದೆ. ಅವೆಲ್ಲವನ್ನೂ ಮೆಟ್ಟಿ ನಿಂತು ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ'' ಎಂದು ಹೇಳಿದ್ದಾರೆ.