ಪಾಟ್ನಾ, ಮೇ. 03 (DaijiworldNews/HR): ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮದುವೆ ಸಮಾರಂಭಗಳಿಗೆ ಹೆಚ್ಚು ಜನ ಸೇರದಂತೆ ಸರ್ಕಾರ ಎಚ್ಚರಿಗೆ ನೀಡಿದ್ದು, ಬಿಹಾರದ ತೇಗ್ರಾ ಉಪವಿಭಾಗದ ತೇಗ್ರಾ ಬಜಾರ್ನಲ್ಲಿ ವಿಶೇಷ ರೀತಿಯಲ್ಲಿ ಮದುವೆ ಸಮಾರಂಭ ನಡೆದಿದೆ.
ಈ ಮದುವೆಯು ಏಪ್ರಿಲ್ 30ರ ರಾತ್ರಿ ನಡದಿದ್ದು, ವಧು-ವರ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕೋಲುಗಳನ್ನು ಬಳಸಿಕೊಂಡು ಪರಸ್ಪರ ಹಾರಗಳನ್ನು ಬದಲಿಸಿದ್ದಾರೆ.
ಕೃತೇಶ್ ಕುಮಾರ್ ಎಂಬವರ ಮದುವೆ ಜ್ಯೋತಿ ಕುಮಾರಿ ಅವರೊಂದಿಗೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದು, ಕೊರೊನಾ ನಿಯಮಗಳನ್ನ ಪಾಲಿಸಿದ್ದರಿಂದ ನವ ಜೋಡಿಗಳಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಈ ಮದುವೆಯಲ್ಲಿ ಸಮಾರಂಭದಲ್ಲಿ ಸರ್ಕಾರ ಜಾರಿಗೊಳಿಸಿರುವ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿದ್ದು, ಈ ವಿಶೇಷ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.