ಬೆಂಗಳೂರು, ಮೇ 03 (DaijiworldNews/MB) : ''ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಪ್ರಧಾನಿಯಂತೆ ವರ್ತಿಸದೆ, ಬಿಜೆಪಿಯ ವಕ್ತಾರರಂತೆ ವರ್ತಿಸಿದ್ದೇ ಈ ಕೊರೊನಾ ದುರಂತಕ್ಕೆ ಕಾರಣ'' ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಕೊರೊನಾ ವೈರಸ್ ದೇಶದಲ್ಲಿ ಅತಿ ವೇಗವಾಗಿ ಹಬ್ಬುತ್ತದೆ ಎಂದು ವೈಜ್ಞಾನಿಕ ಸಲಹೆಗಾರರು ಈ ಮಾರ್ಚ್ ತಿಂಗಳ ಆರಂಭದಲ್ಲೇ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿತ್ತು. ಆದರೆ ಅದನ್ನು ಸರ್ಕಾರ ಕಡೆಗಣಿಸಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ ಎನ್ನಲಾದ ವರದಿಯೊಂದನ್ನು ಉಲ್ಲೇಖ ಮಾಡಿ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದಾರೆ.
''ಕೋವಿಡ್ 2ನೇ ಅಲೆಯ ಅನಾಹುತಕ್ಕೆ ಕೇಂದ್ರದ ವೈಫಲ್ಯವೇ ಕಾರಣ ಎಂಬುದು ಸಾಬೀತಾಗುತ್ತಿದೆ. ಮೋದಿಯವರು ದೇಶದ ಪ್ರಧಾನಿಯಂತೆ ವರ್ತಿಸದೆ, ಬಿಜೆಪಿಯ ವಕ್ತಾರರಂತೆ ವರ್ತಿಸಿದ್ದೇ ಈ ಕೋವಿಡ್ ದುರಂತಕ್ಕೆ ಕಾರಣ ಎಂದು ದೂರಿರುವ ಅವರು, ತಜ್ಞರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ದೇಶ ಸ್ಮಶಾನವಾಗುವದನ್ನು ತಪ್ಪಿಸಬಹುದಿತ್ತಲ್ಲವೆ?'' ಎಂದು ಪ್ರಶ್ನಿಸಿದ್ದಾರೆ.