ಚೆನ್ನೈ, ಮೇ 03 (DaijiworldNews/MB) : ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಅವರು ತಮಿಳುನಾಡಿನ ಅರವಕುರಿಚಿ ಕ್ಷೇತ್ರದಲ್ಲಿ ಡಿಎಂಕೆಯ ಮೊಂಜಾನೂರ್ ಎಲಂಗೋ ಎದುರು ಸೋಲು ಕಂಡಿದ್ದಾರೆ. ''ಆದರೆ ಈ ಸೋಲು ಜೀವನದ ಒಂದು ಭಾಗ, ಇಂಥಹ ಸೋಲುಗಳನ್ನು ಜೀವನದಲ್ಲಿ ಬಹಳ ನೋಡಿದ್ಧೇನೆ'' ಎಂದು ಅಣ್ಣಾಮಲೈ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ನಷ್ಟಗಳು ಜೀವನದ ಒಂದು ಭಾಗ. ಇಂಥಹ ಸೋಲುಗಳನ್ನು ಜೀವನದಲ್ಲಿ ಬಹಳ ನೋಡಿದ್ಧೇನೆ. ಇದು ಸೋಲುಗಳ ಒಂದು ದಿನ. ಗೆಲ್ಲಲು ಬಯಸಿದ್ದೆ ಆದರೆ ಅಂತಿಮ ಗೆರೆಯನ್ನು ದಾಟಲು ಸಾಧ್ಯವಾಗಲಿಲ್ಲ'' ಎಂದು ಹೇಳಿದ್ದಾರೆ.
ಅರವಕುರಿಚಿಯಲ್ಲಿ ಬಿಜೆಪಿಗೆ ಮತ ಹಾಕಿದ ಎಲ್ಲ 68000 ಕ್ಕೂ ಅಧಿಕ ಮತದಾರರಿಗೆ ಧನ್ಯವಾದವನ್ನು ತಿಳಿಸಿರುವ ಅವರು, ''ಇದು ಧೂಳೀಪಟ ಮಾಡುವ ಸಮಯ, ಕಷ್ಟಪಟ್ಟು ಕೆಲಸ ಮಾಡಿ ಹಾಗೂ ಬಿಜೆಪಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಹುರುಪಿನಿಂದ ಕೆಲಸ ಮಾಡಿ'' ಎಂದು ಹೇಳಿದ್ದಾರೆ.