ನವದೆಹಲಿ, ಮೇ.02 (DaijiworldNews/PY): ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾದಿಂದ ಆಕ್ಸಿಜನ್ ಕೊರತೆ ಉಂಟಾಗಿದೆ. ವಿದೇಶದಿಂದ ಕೂಡಾ ತುರ್ತು ಆಮ್ಲಜನಕ ಟ್ಯಾಂಕ್ಗಳನ್ನು ತರಿಸಿಕೊಳ್ಳಲಾಗಿದ್ದು, ಅಲ್ಲದೇ ಆಮ್ಲಜನಕ ವೇಗವನ್ನು ಕೂಡಾ ಹೆಚ್ಚಿಸಲಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಆಮ್ಲಜನಕ ಮೂಲಗಳು ಹಾಗೂ ಲಭ್ಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.
ದೇಶದಲ್ಲಿರುವ ನೈಟ್ರೋಜನ್ ಘಟಕ ಹಾಗೂ ಅದನ್ನು ಪರಿವರ್ತಿಸಿ ಆಕ್ಸಿಜನ್ ಉತ್ಪಾದಕ ಘಟಕ ಕೇಂದ್ರವನ್ನಾಗಿ ಮಾಡುವ ಬಗ್ಗೆ ಪ್ರಧಾನಿ ಮೋದಿ ಅವರು ಸಭೆ ನಡೆಸಿದ್ದಾರೆ.
14 ಕೈಗಾರಿಕೆಗಳಲ್ಲಿನ ನೈಟ್ರೋಜನ್ ಘಟಕಗಳ ಪರಿವರ್ತನೆಗೆ ಗುರುತಿಸಲಾಗಿದೆ. ಇತರೆ ಸಂಘಟನೆಗಳಿಂದ 37 ಘಟಕಗಳನ್ನು ಗುರುತಿಸಿದ್ದು, ಪರಿವರ್ತನೆ ಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯಗಳು ಶೀಘ್ರವೇ ಪೂರ್ಣವಾಗಲಿದ್ದು, ಅಮ್ಲಜನಕ ಉತ್ಪಾದನೆ ಪ್ರಾರಂಭವಾಗಲಿದೆ.
ಸಭೆಯಲ್ಲಿ, ಆಮ್ಲಜನಕದ ಉತ್ಪಾದನೆಗಾಗಿ ಅಸ್ತಿತ್ವದಲ್ಲಿರುವ ಪಿಎಸ್ಐ ನೈಟ್ರೋಜನ್ ಘಟಕಗಳನ್ನು ಪರಿವರ್ತಿಸುವ ಬಗ್ಗೆ ಚರ್ಚೆ ನಡೆಸಲಾಯಿತು.