ಕೋಲ್ಕತ್ತಾ, ಮೇ 2 (DaijiworldNews/MS): ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭಾರಿ ಮುನ್ನಡೆಯಲಿದ್ದು, ಇದೇ ಖುಷಿಯಲ್ಲಿ ಮಾತನಾಡಿದ ದೀದಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಈ ವೇಳೆ ಪಕ್ಷದ ಪರ ಹಾಗೂ ಮಮತಾ ಬ್ಯಾನರ್ಜಿ ಪರ ಘೋಷಣೆ ಕೂಗಿದ ಕಾರ್ಯಕರ್ತರಿಗೆ ಎಲ್ಲರೂ ಮನೆಗೆ ಹೋಗಿ ಎಂದು ಕೋರಿಕೊಂಡಿದ್ದಾರೆ.
ಯಾರೂ ಮೆರವಣಿಗೆಗಳನ್ನು ಮಾಡುವ ಮೂಲಕ ವಿಜಯೋತ್ಸವ ಆಚರಿಸಬಾರದು, ನಮ್ಮ ಆದ್ಯತೆ ಏನಿದ್ದರೂ ಯಾರೂ ಮೆರವಣಿಗೆಗಳನ್ನು ಮಾಡುವ ಮೂಲಕ ಕೋವಿಡ್ ನಿಯಮಾವಳಿಗಳನ್ನು ತಪ್ಪದೆ ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ
ಮಮತಾ ಬ್ಯಾನರ್ಜಿ ಮೊದಲ ಆದ್ಯತೆ ಕೋವಿಡ್ ಸೋಂಕಿನ ವಿರುದ್ಧ ಹೋರಾಡುವುದಾಗಿದೆ. ಕೋವಿಡ್ ನಿಯಮಾವಳಿಗಳನ್ನು ತಪ್ಪದೆ ಪಾಲಿಸಿ ಎಂದು ತನ್ನ ಕಾರ್ಯಕರ್ತರಿಗೆ ಹೇಳಿದ್ದಾರೆ.
ಮಾತ್ರವಲ್ಲ, ಆರು ಗಂಟೆ ಬಳಿಕ ತಾವೇ ಮಾಧ್ಯಮಗಳ ಮೂಲಕ ತಮ್ಮ ವಿಚಾರ-ಅನಿಸಿಕೆಗಳನ್ನು ಹಂಚಿಕೊಳ್ಳುವುದಾಗಿಯೂ ಹೇಳಿದ್ದಾರೆ. ಟಿಎಂಸಿಯ ಭಾರಿ ಮುನ್ನಡೆಯ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಏನು ಹೇಳಲಿದ್ದಾರೆ ಎಂಬ ಕುತೂಹಲದಲ್ಲಿ ಈಗ ಟಿಎಂಸಿ ಬೆಂಬಲಿಗರು ಕಾಯುತ್ತಿದ್ದಾರೆ. ಇನ್ನು ತೀವ್ರ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಗೆ 1200 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. 292 ಸ್ಥಾನಗಳ ಪೈಕಿ ಟಿಎಂಸಿ 215 ಸ್ಥಾನಗಳಿಂದ ಈಗಾಗಲೇ ಭಾರಿ ಮುಂಚೂಣಿಯಲ್ಲಿದೆ.