ತಿರುವನಂತಪುರ, ಮೇ.02 (DaijiworldNews/PY): ಕೇರಳ ವಿಧಾನಸಭಾ ಚುನಾವಣೆಯ ಮತೆಣಿಕೆ ಬಿರುಸಿನಿಂದ ಮುಂದುವರೆದಿದ್ದು, ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಮೆಟ್ರೋ ಮ್ಯಾನ್ ಇ.ಶ್ರೀಧರನ್ ಅವರಿಗೆ ಸೋಲು ಅನುಭವಿಸಿದ್ದು, ಯುಡಿಎಫ್ ಅಭ್ಯರ್ಥಿ ಶಫಿ ಪರಂಬಿಲ್ ಗೆಲುವು ಸಾಧಿಸಿದ್ದಾರೆ.
ಪಾಲಕ್ಕಾಡ್ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಶಫಿ ಪರಂಬಿಲ್ ಅವರ ವಿರುದ್ದ ಇ.ಶ್ರೀಧರನ್ ಅವರನ್ನು ಕಣಕ್ಕಿಳಿಸಿತ್ತು. ಇದೀಗ ಪಾಲಕ್ಕಾಡ್ ಕ್ಷೇತ್ರದಲ್ಲಿ 3,840 ಮತಗಳ ಅಂತರದಿಂದ ಇ. ಶ್ರೀಧರನ್ ಅವರು ಸೋಲು ಅನುಭವಿಸಿದ್ದಾರೆ.
ದೇಶದಲ್ಲಿನ ಮೆಟ್ರೋ ಯೋಜನೆಯ ರೂವಾರಿಯಾಗಿದ್ದ ಇ.ಶ್ರೀಧರನ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು, ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದರು.