ನವದೆಹಲಿ, ಮೇ.02 (DaijiworldNews/HR): ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ದೇಶದಲ್ಲಿ ವೈದ್ಯರು, ನರ್ಸ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳ ಕೊರತೆ ಎದುರಾಗಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ.
ಭಾರತದ ಮಾನವ ಸಂಪನ್ಮೂಲ ಸ್ಥಿತಿಗತಿ ಕುರಿತು ಮೋದಿ ಚರ್ಚೆ ನಡೆಸಲಿದ್ದು, ದೇಶದಲ್ಲಿನ ಮಾನವ ಸಂಪನ್ಮೂಲ ಪರಿಸ್ಥಿತಿ ಹಾಗೂ ಪರಿಹಾರಕ್ಕೆ ಈ ಸಭೆ ನಡೆಸಲಾಗುತ್ತಿದೆ.
ಇನ್ನು ಅನೇಕ ಹಲವು ಆಸ್ಪತ್ರೆಗಳ ಸಿಬ್ಬಂದಿಗಳು ಹೆಚ್ಚುವರಿ ಸಮಯ ಕರ್ತವ್ಯ ನಿಭಾಯಿಸುತ್ತಿದ್ದು, ಹಲವು ಆಸ್ಪತ್ರೆ ಸಿಬ್ಬಂದಿಗಳಲ್ಲಿ ಕೊರೊನಾ ಕಾಣಿಸಿಕೊಂಡ ಕಾರಣ ಆಸ್ಪತ್ರೆಯಲ್ಲಿ ಮಾನವ ಸಂಪೂನ್ಮೂಲ ಕೊರತೆ ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಮಾನವ ಸಂಪೂನ್ಮೂಲ ಕೊರತೆ ಎದುರಿಸಲು ತೆಗೆದುಕೊಳ್ಳಬೇಕಾದ ನಿಧಾರದ ಕುರಿತು ಮೋದಿ ಚರ್ಚಿಸಲಿದ್ದಾರೆ.