ಧಾರವಾಡ,ಮೇ.02 (DaijiworldNews/HR): ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಮದುವೆಯಾದ ಒಂದೇ ದಿನದಲ್ಲಿ ಮದುಮಗ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರವಿವಾರ ನಡೆದಿದೆ.
ಸಾವನ್ನಪ್ಪಿದ್ದ ಯುವಕನನ್ನು ಶಶಿಕುಮಾರ್ ಪಟ್ಟಣಶೆಟ್ಟಿ(28) ಎಂದು ಗುರುತಿಸಲಾಗಿದೆ.
ತಬಕದಹೊನ್ನಳ್ಳಿಯಲ್ಲಿ ಶನಿವಾರ ವರನ ಮನೆಯಲ್ಲಿ ಸರಳವಾಗಿ ಮದುವೆ ಜರುಗಿತ್ತು. ಈ ಮೊದಲು ಕಳೆದ ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಜ್ವರದ ನಡುವೆ ಕೂಡ ಮದುವೆಯ ಶಾಸ್ತ್ರ ಮುಗಿಸಿ ನಂತರ ಶಿಗ್ಗಾವ ತಾಲೂಕಿನ ಮುಕಬಸರಿಕಟ್ಟಿಯಲ್ಲಿನ ವಧುವಿನ ಮನೆಗೆ ನವ ದಂಪತಿಗಳು ತೆರಳಿದ್ದರು ಎನ್ನಲಾಗಿದೆ.
ಇನ್ನು ವಧುವಿನ ಮನೆಯಲ್ಲಿ ಶಶಿಕುಮಾರ್ಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಶಶಿಕುಮಾರ್ ಅವರ ನಿಧನನಿಂದ ಎರಡೂ ಕುಟುಂಬಗಳಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಚಿದೆ.