ನವದೆಹಲಿ, ಮೇ.02 (DaijiworldNews/PY): ಆರ್ಬಿಐನ ನಾಲ್ಕನೇ ಡೆಪ್ಯುಟಿ ಗವರ್ನರ್ ಆಗಿ ಟಿ.ರಬಿ ಶಂಕರ್ ಅವರನ್ನು ನೇಮಕ ಮಾಡಲಾಗಿದೆ.
ಎಪ್ರಿಲ್ 2ರಂದು ಬಿ ಪಿ ಕನೂಂಗೊ ಅವರು ನಿವೃತ್ತಿಯಾಗಿದ್ದರು. ತೆರವಾಗಿದ್ದ ಸ್ಥಾನಕ್ಕೆ ಆರ್ಬಿಐನ ಕಾರ್ಯನಿರ್ವಾಹಕ ನಿರ್ದೇಶಕ ಟಿ. ರಬಿ ಶಂಕರ್ ಅವರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
ರಬಿ ಶಂಕರ್ ಅವರು ಫಿನ್ಟೆಕ್, ಮಾಹಿತಿ ತಂತ್ರಜ್ಞಾನ, ಪಾವತಿ ವ್ಯವಸ್ಥೆಯ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆಗಳಿವೆ.
ಶಂಕರ್ ಅವರು 1990ರ ಸೆಪ್ಟೆಂಬರ್ನಲ್ಲಿ ಕೇಂದ್ರೀಯ ಬ್ಯಾಂಕ್ಗೆ ಸಂಶೋಧನಾ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದರು. ಇವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ವಿಜ್ಞಾನ ಮತ್ತು ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.