ನವದೆಹಲಿ, ಮೇ 2 (DaijiworldNews/MS): ಸೀರಮ್ ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ ಅವರಿಗೆ ಲಸಿಕೆಗಳ ಪೂರೈಕೆಯ ಬಗ್ಗೆ ದೇಶದ ಪ್ರಭಾವಿ ವ್ಯಕ್ತಿಗಳಿಂದ ಸಿಎಂ, ಉದ್ಯಮಿಗಳಿಂದ ಬೆದರಿಕೆ ಕರೆ ಹಾಗೂ ಒತ್ತಡ ಬರುತ್ತಿರುವ ಹಿನ್ನಲೆಯಲ್ಲಿ ಲಂಡನ್ ಗೆ ತೆರಳಿದ್ದು, ಶೀಘ್ರ ಭಾರತಕ್ಕೆ ಹಿಂತಿರುಗುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು , ಸೀರಮ್ ಇನ್ಸ್ಟಿಟ್ಯೂಟ್ ಸುಮಾರು ಒಂದು ಸಾವಿರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ ಮತ್ತು ಪ್ರತಿದಿನ 20 ಗಂಟೆಗಳ ಕಾಲ ಅದರ ಕೆಲಸ ನಿರ್ವಹಿಸುತ್ತಿದ್ದು, ಇದು ನಮ್ಮ ಸಂಸ್ಥೆ ಗರಿಷ್ಠ ಸಾಧ್ಯವಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ ಮುಂದಿನ ವಾರ ನೊವಾವಾಕ್ಸ್ ಉತ್ಪಾದನೆಯನ್ನು ಪ್ರಾರಂಭಿಸಲಿದೆ ಆದರೆ ಲಸಿಕೆ-ಸಂಬಂಧಿತ ಉತ್ಪನ್ನಗಳ ಮೇಲೆ ಯುಎಸ್ ನಿಷೇಧದಿಂದಾಗಿ ಮೂಲತಃ ಯೋಜಿಸಿದ್ದಕ್ಕಿಂತ ಮೂರನೇ ಒಂದು ಭಾಗವನ್ನು ಮಾತ್ರ ಉತ್ಪಾದಿಸಲು ಸಾಧ್ಯವಾಗುತ್ತದೆ.
ಕೋವಿಡ್ 19 ಲಸಿಕೆಗಳ ಬೇಡಿಕೆಯ ಮೇಲೆ “ಒತ್ತಡ ಮತ್ತು ಬೆದರಿಕೆಗಳು ಬರುತ್ತಿರುವ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ನಾನು ಭಾರತಕ್ಕೆ ಹಿಂದಿರುಗುವುದಿಲ್ಲ X, Y ಅಥವಾ Z ನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದ ಕಾರಣ, ಅವರು ಏನು ಮಾಡಲಿದ್ದಾರೆಂದು ಊಹಿಸಲು ಸಾಧ್ಯವಿಲ್ಲ. ಎಲ್ಲವೂ ನನ್ನ ಹೆಗಲ ಮೇಲೆ ಭಾರವಾಗುವಾಗ ಒಬ್ಬನಿಂದ ಎಲ್ಲವನ್ನೂ ಸಾಧ್ಯವಿಲ್ಲ ಎಂದು ಹೇಳಿದ್ದರು. ತಾನು ಕುಟುಂಬ ಸಮೇತ ಲಂಡನ್ ಗೆ ಬರಲು ತೆಗೆದುಕೊಂಡ ನಿರ್ಧಾರದ ಹಿಂದೆ ಆಕ್ರಮಣಕಾರಿಯಂತಹ ಒತ್ತಡ ಹೆಚ್ಚಾಗಿದೆ 40 ವರ್ಷದ ಉದ್ಯಮಿ ಆಧಾರ್ ಹೇಳಿದ್ದರು
ಇದಾದ ಬಳಿಕ ಶನಿವಾರ ತಡರಾತ್ರಿ ಟ್ವೀಟ್ ಮಾಡಿದ ಪೂನವಾಲಾ, ಯುಕೆ ನಲ್ಲಿ ನಮ್ಮ ಎಲ್ಲ ಪಾಲುದಾರರು ಮತ್ತು ಷೇರುದಾರರೊಂದಿಗೆ ಸಭೆ ನಡೆಸಿದ್ದೇವೆಕೋವಿಶೀಲ್ಡ್ – ಆಕ್ಸ್ಫರ್ಡ್ / ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆ ಭಾರತದ ಸೀರಮ್ ಇನ್ ಸ್ಟಿಟ್ಯೂಟ್ ಉತ್ಪಾದಿಸುತ್ತಿದೆ – ಪುಣೆಯಲ್ಲಿನ ಎಸ್ ಐ ಐ ಸೌಲಭ್ಯದಲ್ಲಿ ಪೂರ್ಣ ಪ್ರಗತಿಯಲ್ಲಿದೆ. ಪುಣೆಯಲ್ಲಿ ಕೋವಿಶೀಲ್ಡ್ ಉತ್ಪಾದನೆಯು ಭರದಿಂದ ಸಾಗುತ್ತಿದೆ ಎಂದು ಹೇಳಲು ಸಂತೋಷವಾಗಿದೆ. ಕೆಲವೇ ದಿನಗಳಲ್ಲಿ ನಾನು ಭಾರತಕ್ಕೆ ಹಿಂದಿರುಗಿದ ನಂತರ ಕಾರ್ಯಾಚರಣೆಗಳನ್ನು ಪರಿಶೀಲಿಸಲು ಎದುರು ನೋಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.