ಬೀದರ್, ಮೇ.02 (DaijiworldNews/HR): ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರು 20,904 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಒಟ್ಟು 70,556 ಮತಗಳಿಸಿ ಗೆಲುವಿನ ನಗೆ ಬೀರಿದ್ದಾರೆ.
ಶರಣು ಸಲಗರ ಅವರು ಶಿಕ್ಷಕ ವೃತ್ತಿ ತೊರೆದು ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು, ಇದೀಗ ರಾಜಕೀಯ ಅವರ ಕೈ ಹಿಡಿದಿದೆ.
50,108 ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ದಿ. ಬಿ.ನಾರಾಯಣರಾವ್ರ ಪತ್ನಿ ಮಾಲಾ(ಮಲ್ಲಮ್ಮ) 2ನೇ ಸ್ಥಾನ ಪಡೆದು ಪರಾಭವಗೊಂಡಿದ್ದಾರೆ.
ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾಗೆ ಕೇವಲ 9390 ಮತಗಳು ಲಭಿಸಿವೆ. ಇನ್ನು ಜೆಡಿಎಸ್ನಿಂದ ಸೈಯದ್ ಅಲಿ ಖಾದ್ರಿ 11390 ಮತ ಪಡೆದು 3ನೇ ಸ್ಥಾನಕ್ಕೆ ಇಳಿದಿದ್ದಾರೆ.