ಭುವನೇಶ್ವರ, ಮೇ.02 (DaijiworldNews/HR): ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಒಡಿಶಾ ಸರ್ಕಾರವು ಮೇ 5ರಿಂದ 14 ದಿನಗಳ ಕಾಲ ಲಾಕ್ಡೌನ್ ಘೋಷಿಸಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
"ಒಡಿಶಾದಲ್ಲಿ ಮೇ 5ರಿಂದ ಮೇ19ರ ಬೆಳಿಗ್ಗೆ 5 ಗಂಟೆಯ ತನಕ ಲಾಕ್ಡೌನ್ ಜಾರಿಯಲ್ಲಿರಲಿದ್ದು, ಈ ಎರಡು ವಾರಗಳ ಲಾಕ್ಡೌನ್ ಅವಧಿಯಲ್ಲಿ ವಾರಾಂತ್ಯಗಳನ್ನು ಹೊರತುಪಡಿಸಿ ಇತರೆ ದಿನಗಳಲ್ಲಿ ಅಗತ್ಯ ಸೇವೆಗಳು ಲಭ್ಯವಿರಲಿವೆ" ಎಂದು ಒಡಿಶಾದ ಮುಖ್ಯ ಕಾರ್ಯದರ್ಶಿ ಎಸ್.ಸಿ ಮೊಹಾಪಾತ್ರ ತಿಳಿಸಿದ್ದಾರೆ.
ಇನ್ನು ಜನರು ತಮ್ಮ ಮನೆಯಿಂದ 500 ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದ್ದು, ವಾರಾಂತ್ಯದಲ್ಲಿ ಕೇವಲ ವೈದ್ಯಕೀಯ ಸೇವೆಗಳು ಮಾತ್ರ ಇರಲಿವೆ" ಎಂದು ಆದೇಶದಲ್ಲಿ ಹೇಳಲಾಗಿದೆ.