ನವದೆಹಲಿ, ಮೇ.02 (DaijiworldNews/HR): ಕೊರೊನಾ ಪ್ರಕರಣಗಳು ದೇಶದೆಲ್ಲೆಡೆ ಹರಡಿದ್ದು, ನವಜಾತ ಶಿಶುಗಳನ್ನೂ ಬೆಂಬಿಡದೆ ಕಾಡುತ್ತಿದೆ. ಇಂತಹ ಕೊರೊನಾ ಸೋಂಕನ್ನೇ ಗೆದ್ದು ಬಂದಿದೆ 23 ದಿನಗಳ ಮುದ್ದು ಕಂದಮ್ಮ.
ಸಾಂಧರ್ಭಿಕ ಚಿತ್ರ
ಹುಟ್ಟಿದ 8 ದಿನಕ್ಕೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಉತ್ತರ ಪ್ರದೇಶದ ಘಾಜಿಯಾಬಾದ್ ನ ನವಜಾತ ಶಿಶು 15 ದಿನಗಳ ಸತತ ಚಿಕಿತ್ಸೆ ಬಳಿಕ ಇದೀಗ ಕೊರೊನಾ ಸೋಂಕು ಗೆದ್ದು ಬಂದಿದೆ.
ಇನ್ನು ಮಗು ಹುಟ್ಟುವ ಮೊದಲು ತಾಯಿಯನ್ನು ಕೊರೊನಾ ಪರೀಕ್ಷೆಗೆಒಳಪಡಿಸಲಾಗಿತ್ತು, ಆದರೆ ಅವರಿಗೆ ಸೋಂಕು ಇರಲಿಲ್ಲ. ಹೆರಿಗೆ ಬಳಿಕ ತಾಯಿ 8 ದಿನದ ಮಗುವಿನೊಂದಿಗೆ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಆ ವೇಳೆ ತಾಯಿಗೆ ಸೋಂಕು ತಗುಲಿತ್ತು. ಹೀಗಾಗಿ ಕಂದಮ್ಮ ಕೂಡ ಕೊರೊನಾ ಸೋಂಕಿಗೆ ಒಳಗಾಗಿತ್ತು.
15 ದಿನಗಳ ಕಾಲ ಮಗುವಿಗೆ ವೈದ್ಯರ ನಿಗಾದಲ್ಲಿರಿಸಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಮಗುವಿನ ವರದಿಯಲ್ಲಿ ನೆಗೆಟಿವ್ ಬಂದಿದೆ.