ತಿರುವನಂತಪುರಂ, ಮೇ 02 (DaijiworldNews/MB) : ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್ಡಿಎಫ್ ಭಾರೀ ಮುನ್ನಡೆಯೊಂದಿಗೆ ಸಾಗಿದ್ದು ಮತ್ತೆ ಅಧಿಕಾರಕ್ಕೆ ಏರುವುದು ಬಹುತೇಕ ಖಚಿತವಾಗಿದೆ.
140 ಸದಸ್ಯ ಬಲದ ಕೇರಳದ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 71 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ. ಆದರೆ ಈ ಮ್ಯಾಜಿಕ್ ನಂಬರ್ 71 ದಾಟಿ 91ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿರುವ ಎಲ್ಡಿಎಫ್ ಮತ್ತೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗುತ್ತಿದೆ.
ಕೊರೊನಾ ಕಾಲದಲ್ಲಿ ಕೈಗೊಂಡ ಜನಪ್ರಿಯ ಕ್ರಮಗಳು, ಪ್ರವಾಹ ಮೊದಲಾದ ಬಿಕ್ಕಟ್ಟಿನ ಸಂದರ್ಭದಲ್ಲೂ ದೃಢವಾಗಿ ನಿಂತ ಎಲ್ಡಿಎಫ್ ಸರ್ಕಾರದ ಕ್ರಮಗಳೇ ಈ ಮುನ್ನಡೆಗೆ ಕಾರಣ ಎಂದು ಹೇಳಲಾಗಿದೆ.
ಇನ್ನು ಎಲ್ಡಿಎಫ್ 91 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ 44 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಈ ನಡುವೆ ಬಿಜೆಪಿ 3 ಅಭ್ಯರ್ಥಿಗಳು ಹಾಗೂ ಇತರೆ 2 ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.