ಹೈಲಾಕಾಂಡಿ,ಮೇ.02 (DaijiworldNews/HR): ಅಸ್ಸಾಂನ ಮತ ಎಣಿಕೆ ಕೇಂದ್ರದ ಹತ್ತಿರ ಟ್ರಂಕ್ನಲ್ಲಿಡಲಾಗಿದ್ದ ಬಳಕೆಯಾಗದ ಇವಿಎಂ ಯಂತ್ರ ಪತ್ತೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಹೈಲಾಕಾಂಡಿ ಜಿಲ್ಲಾ ಚುನಾವಣಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇವಿಎಂ ಪತ್ತೆಯಾದ ಸುದ್ದಿ ತಿಳಿದು ಕ್ಷೇತ್ರದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದಾಗ ಆ ಯಂತ್ರವನ್ನು ಮತದಾನದ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಬಳಕೆ ಮಾಡಿಕೊಳ್ಳಲು ತರಿಸಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.
ಇನ್ನು ಟ್ರಂಕ್ನಲ್ಲಿ ಪತ್ತೆಯಾಗಿರುವ ಇವಿಎಂ ಯಂತ್ರದಲ್ಲಿ ಮತ ಚಲಾವಣೆಯಾಗಿಲ್ಲ. ಹೀಗಾಗಿ ರಾಜಕೀಯ ಮುಖಂಡರುಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಲಾಗಿದೆ.