ತಮಿಳುನಾಡು, ಮೇ.02 (DaijiworldNews/PY): ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಸ್ಪರ್ಧಿಸಿರುವ ಅರವಕುರಿಚಿ ಕ್ಷೇತ್ರದಲ್ಲಿ ಕುತೂಹಲ ಮನೆ ಮಾಡಿದೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಅಣ್ಣಾಮಲೈ ಅವರನ್ನು ತಮ್ಮ ಸ್ವಕ್ಷೇತ್ರವಾಗಿರುವ ಅರವಕುರಿಚಿಯಿಂದ ಕಣಕ್ಕೆ ಇಳಿಸಿದೆ.
ಈವರೆಗೆ ನಡೆದಿರುವ ಫಲಿತಾಂಶದಲ್ಲಿ ಅಣ್ಣಾಮಲೈ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೊದಲ ಎರಡು ಹಂತದ ಮತ ಎಣಿಕೆಯಲ್ಲಿ ಅಣ್ಣಾಮಲೈ ಅವರಿಗೆ ಹಿನ್ನಡೆಯಾಗಿದ್ದು, ಡಿಎಂಕೆಯ ಮೊಂಜಾನೂರ್ ಎಲಂಗೋ ಅವರು ಮುನ್ನಡೆ ಸಾಧಿಸಿದ್ದರು.
ಮೂರನೇ ಹಂತದಲ್ಲಿ ಡಿಎಂಕೆಯ ಎಲಂಗೋ ಅವರು 2,995 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರೆ, ಅಣ್ಣಾಮಲೈ ಅವರು 3,034 ಮತಗಳ ಮುನ್ನಡೆ ಕಾಯ್ದುಕೊಂಡಿದ್ದು, ಕೊನೆಯ ಕ್ಷಣದಲ್ಲಿ ಏನಾಗುತ್ತದೆ ಎನ್ನುವ ಕುತೂಹಲವಿದೆ.