ಕೋಲ್ಕತ, ಮೇ.02 (DaijiworldNews/PY): "ಪಶ್ಚಿಮ ಬಳಗಾಳದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಭಾರೀ ಮುನ್ನಡೆಯೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದೆ ಸಾಗುತ್ತಿದೆ. ಆದರೆ, ಸಂಜೆಯ ವೇಳೆಗೆ ಫಲಿತಾಂಶದ ಚಿತ್ರಣವೇ ಬದಲಾಗಲಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, "ಇನ್ನೂ ಕೂಡಾ ಹಲವು ಸುತ್ತುಗಳಿರುವುದರಿಂದ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಸಂಜೆಯ ವೇಳೆ ಸ್ಪಷ್ಟ ಚಿತ್ರಣ ತಿಳಿಯಲಿದೆ. ನಾವು 3ರಿಂದ ಪ್ರಾರಂಭಿಸಿದ್ದು ಹಾಗೂ ನಮಗೆ 100 ಸ್ಥಾನವೂ ದೊರಕುವುದಿಲ್ಲ ಎಂದು ಸವಾಲು ಹಾಕಲಾಗಿತ್ತು. ಆ ಗಡಿಯನ್ನು ನಾವು ದಾಟಿದ್ದು, ನಾವು ಮ್ಯಾಜಿಕ್ ನಂಬರ್ ಅನ್ನು ಕೂಡಾ ದಾಟಲಿದ್ದೇವೆ' ಎಂದಿದ್ದಾರೆ.
294 ವಿಧಾನಸಭಾ ಸ್ಥಾನಗಳ ಪೈಕಿ ಅಧಿಕಾರಕ್ಕೆ ಏರಲು 147 ಮ್ಯಾಜಿಕ್ ನಂಬರ್ನ ಅಗತ್ಯ ಇದೆ. ಹೀಗಾಗಿ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದಲ್ಲಿ ಭಾರೀ ನಿರೀಕ್ಷೆ ಇದೆ.