ಬೆಂಗಳೂರು: ಕೋವಿಡ್ ಆರ್ಭಿಟಿಸುತ್ತಿರುವ ಹೊತ್ತಿನಲ್ಲೇ ಕೇಂದ್ರ ಚುನಾವಣಾ ಆಯೋಗಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಿದ್ದು, ಸದ್ಯ ಮತ ಎಣಿಕೆ ನಡೆಯುತ್ತಿದ್ದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಸಾಕಷ್ಟು ಪ್ರಚಾರ ಪಡೆದಿರುವ ಅಭ್ಯರ್ಥಿಗಳಾದ ಬಿಜೆಪಿ ಅಭ್ಯರ್ಥಿ ಇ. ಶ್ರೀಧರನ್ ಪಲಕ್ಕಾಡ್ , ಬಿಜೆಪಿಯ ಅಭ್ಯರ್ಥಿ ಅಣ್ಣಮಲೈ, ತಮಿಳುನಾಡಿನಲ್ಲಿ ಅಭ್ಯರ್ಥಿ ಕಮಲಹಾಸನ್ ಇವರಲ್ಲಿ ಯಾರಿಗೆಲ್ಲಾ ವಿಜಯಮಾಲೆ ಬೀಳಲಿದೆ ಎನ್ನುವ ಕುತೂಹಲ ಆರಂಭವಾಗಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಡಿಎಂಕೆ 42 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ತಮಿಳುನಾಡಿನಲ್ಲಿ ಬಿಜೆಪಿಯ ಅಭ್ಯರ್ಥಿ ಅಣ್ಣಮಲೈ ಮುನ್ನಡೆ ಸಾಧಿಸಿದ್ದಾರೆ.
ಇನ್ನು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ, ಮಕ್ಕಲ್ ನೀಧಿ ಮಯಂ ಪಕ್ಷದ ಸ್ಥಾಪಕ ರಾಜಕಾರಣಿ ಕಮಲ್ ಹಾಸನ್ ಅವರು ಹಿನ್ನಡೆ ಸಾಧಿಸಿದ್ದಾರೆ.
ಕೇರಳದಲ್ಲಿ ಮತಎಣಿಕೆಯ ಆರಂಭಿಕ ಟ್ರೆಂಡ್ ಪ್ರಕಾರ ಶ್ರೀಧರನ್ ಮುನ್ನಡೆ ಕಾಯ್ದುಕೊಂಡಿದ್ದು, ಎರಡು ಬಾರಿ ಕಾಂಗ್ರೆಸ್ ಶಾಸಕರಾದ ಯೂತ್ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಫಿ ಪರಂಬಿಲ್ ಮತ್ತು ಸಿಪಿಐ-ಎಂ ನ ಸಿಪಿ ಪ್ರಮೋದ್ ವಿರುದ್ಧ ಮೆಟ್ರೊಮ್ಯಾನ್ ಸ್ಪರ್ಧಿಸಿದ್ದಾರೆ.