ನವದೆಹಲಿ, ಮೇ.02 (DaijiworldNews/PY): ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ ನಡೆದಿರುವ ಪಂಚರಾಜ್ಯಗಳ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
ಪಶ್ಚಿಮ ಬಂಗಾಳ ಸೇರಿದಂತೆ ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಅಸ್ಸಾಂನ ಅಧಿಕಾರದ ಗದ್ದುಗೆಯನ್ನು ಈ ಬಾರಿ ಯಾರು ಹಿಡಿಯಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಮಧ್ಯಾಹ್ನದ ಒಳಗೆ ಚುನಾವಣಾ ಮತ ಎಣಿಕೆಯ ಸ್ಪಷ್ಟ ಚಿತ್ರ ಹೊರಬೀಳುವ ಸಾಧ್ಯತೆ ಇದೆ.
ಇನ್ನು ಪಂಚರಾಜ್ಯ ಚುನಾವಣಾ ಫಲಿತಾಂಶದೊಂದಿಗೆ ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವೂ ಹೊರಬೀಳಲಿದೆ. ಈ ನಡುವೆ ಎಲ್ಲಾ ಕ್ಷೇತ್ರಗಳಲ್ಲೂ ಕೊರೊನಾ ನಿಯಮ ಪಾಲನೆಯ ಜೊತೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದೆ.