ಕೇರಳ, ಮೇ.02 (DaijiworldNews/HR): ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಕೇರಳದಲ್ಲಿ ಎಲ್ಡಿಎಫ್ 61 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಯುಡಿಎಫ್ 42 ಮತ್ತು ಎನ್ಡಿಎ 02 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಕೇರಳದಲ್ಲಿ ಎರಡನೇ ಬಾರಿಗೆ ಎಲ್ಡಿಎಫ್ ಆಡಳಿತಕ್ಕೆ ಏರುವ ಮುನ್ಸೂಚನೆ ನೀಡಿದೆ.
ಕೊನೆಯ ಸುತ್ತಿನವರೆಗೂ ಎಲ್ಡಿಎಫ್ ಮೈತ್ರಿಕೂಟ ಇದೇ ಮುನ್ನಡೆ ಕಾಯ್ದುಕೊಂಡರೆ ಮತ್ತೊಮ್ಮೆ ಪೂರ್ಣಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತವಾಗಲಿದೆ.