ಬೆಂಗಳೂರು, ಮೇ 01 (DaijiworldNews/SM): ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಸರಕಾರದಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಗೊಂಡಿದೆ. ನೂತನ ಮೂರ್ಗಸೂಚಿಯ ಪ್ರಕಾರ ಒಂದಿಷ್ಟು ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಜನಸಂದಣಿ ತಪ್ಪಿಸುವ ಸಲುವಾಗಿ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
ನೂತನ ಮಾರ್ಗಸೂಚಿ ರವಿವಾರದಿಂದಲೇ ಅನ್ವಯವಾಗಲಿದೆ. ಮಾರುಕಟ್ಟೆಯ ದರದಲ್ಲೇ ಅಗತ್ಯ ವಸ್ತುಗಳನ್ನು ತರಕಾರಿಗಳನ್ನು ಮಾರಾಟ ಮಾಡಬೇಕು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರಕಾರ ಸೂಚಿಸಿದೆ.
ನೂತನ ಮಾರ್ಗಸೂಚಿಯಲ್ಲಿ ಏನಿದೆ?
ಹಾಪ್ ಕಾಮ್ಸ್, ತಳ್ಳುವ ಗಾಡಿ ಮೂಲಕ ಹಣ್ಣು ತರಕಾರಿ ಮಾರಾಟಕ್ಕೆ ಅವಕಾಶ
ಹಾಲಿನ ಬೂತ್ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ತೆರೆಯಲು ಅನುಮತಿ
ಎಪಿಎಂಸಿ, ದಿನಸಿ ಅಂಗಡಿ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ತೆರೆಯಲು ಅವಕಾಶ
ದುಬಾರಿ ಬೆಲೆಗೆ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಆದೇಶ
ಎಲ್ಲ್ಲಾ ರೀತಿಯ ಸಂತೆ, ವಾರದ ಸಂತೆಗಳಿಗೆ ಸಂಪೂರ್ಣ ನಿರ್ಬಂಧ