ಹೈದರಾಬಾದ್, ಮೇ. 01 (DaijiworldNews/HR): ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಆಮದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆ ಇಂದು ಭಾರತಕ್ಕೆ ಆಗಮಿಸಿದೆ.
ಸಾಂಧರ್ಭಿಕ ಚಿತ್ರ
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು ಅದರ ನಿಯಂತ್ರಣಕ್ಕಾಗಿ ಕೊರೊನಾ ಲಸಿಕಾ ಅಭಿಯಾನ ಹೆಚ್ಚುಗೊಳಿಸಲಾಗಿದ್ದು, ದೇಶೀಯ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಜೊತೆಗೆ, ವಿದೇಶದಿಂದಲೂ ಲಸಿಕೆ ಆಮದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.
ಸ್ಪುಟ್ನಿಕ್-ವಿ ಆಮದಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಇಂದು ರಷ್ಯಾದಿಂದ ವಿಮಾನದ ಮೂಲಕ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಮೊದಲ ಹಂತದ ಲಸಿಕೆ ಆಗಮಿಸಿದೆ.
1.5 ಲಕ್ಷ ಡೋಸ್ ಇಂದು ದೇಶಕ್ಕೆ ಬಂದಿದ್ದು, ಮೇ ತಿಂಗಳಿನಲ್ಲಿ 30 ಲಕ್ಷ ಡೋಸ್ ಬರಲಿದೆ. ಜೂನ್ 50 ಲಕ್ಷ ಡೋಸ್, ಜುಲೈ ನಲ್ಲಿ 1 ಕೋಟಿ ಡೋಸ್ ಸ್ಪುಟ್ನಿಕ್-ವಿ ಲಸಿಕೆ ಬರಲಿದೆ.