ನವದೆಹಲಿ, ಮೇ 01 (DaijiworldNews/MB) : ಸುಮಾರು ಒಂದು ಗಂಟೆಗೂ ಅಧಿಕ ಕಾಲ ಆಮ್ಲಜನಕ ಪೂರೈಕೆಯಾಗದ ಹಿನ್ನೆಕೆ ಓರ್ವ ವೈದ್ಯರೂ ಸೇರಿ 8 ಮಂದಿ ಕೊರೊನಾ ರೋಗಿಗಳು ಮೃತಪಟ್ಟ ಘಟನೆ ನಡೆದಿರುವುದಾಗಿ ದೆಹಲಿಯ ಬಾತ್ರಾ ಆಸ್ಪತ್ರೆ ಶನಿವಾರ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಬಾತ್ರಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್ಸಿಎಲ್ ಗುಪ್ತಾ ಹೈಕೋರ್ಟ್ಗೆ, ನಮಗೆ ಸಮಯಕ್ಕೆ ಸರಿಯಾಗಿ ಆಮ್ಲಜನಕ ಲಭಿಸದ ಕಾರಣ ಮಧ್ಯಾಹ್ನ 12 ಗಂಟೆಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಧ್ಯಾಹ್ನ 1:35 ಕ್ಕೆ ನಮಗೆ ಆಕ್ಸಿಜನ್ ಲಭಿಸಿದೆ. ಈ ಒಂದೂವರೆ ಗಂಟೆ ಕಾಲ ಒರ್ವ ವೈದ್ಯ ಸೇರಿದಂತೆ ಎಂಟು ಮಂದಿ ರೋಗಿಗಳು ಸಾವನ್ನಪ್ಪಿದ್ದಾರೆ. ನಾವು ಆಕ್ಸಿಜನ್ ಇಲ್ಲದ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಬಾತ್ರಾ ಆಸ್ಪತ್ರೆ ಈ ಹಿಂದೆ ಆಮ್ಲಜನಕ ಬರೀ 10 ನಿಮಿಷಕ್ಕೆ ಬೇಕಾಗುವಷ್ಟು ಮಾತ್ರವಿದೆ. ಆಸ್ಪತ್ರೆಯಲ್ಲಿ 326 ರೋಗಿಗಳು ಇದ್ದಾರೆ ಎಂದು ತಿಳಿಸಿತ್ತು.