ನವದೆಹಲಿ, ಮೇ.01 (DaijiworldNews/PY): ಮೇ 2ರಂದು ಉತ್ತರಪ್ರದೇಶದ ಗ್ರಾಮಪಂಚಾಯತ್ ಚುನಾವಣೆಯ ಮತ ಎಣಿಕೆ ನಡೆಸಲು ಸುಪ್ರೀಂಕೋರ್ಟ್ ಶನಿವಾರ ಉತ್ತರಪ್ರದೇಶ ಚುನಾವಣಾ ಆಯೋಗಕ್ಕೆ ಅನುಮತಿ ನೀಡಿದೆ.
ಮೇ 2ರಂದು ಉತ್ತರಪ್ರದೇಶದ ಗ್ರಾಮಪಂಚಾಯತ್ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ನಡೆಸಲು ಸುಪ್ರೀಂಕೋರ್ಟ್ ಶನಿವಾರ(ಮೇ 1) ಅನುಮತಿ ನೀಡಿದೆ.
ಜಸ್ಟೀಸ್ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠವು ಚುನಾವಣಾ ಆಯೋಗ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಿದ್ದು, "ಪ್ರತೀ ಮತ ಎಣಿಕೆ ಕೇಂದ್ರಗಳಲ್ಲಿ ಕೊರೊನಾ ಮಾರ್ಗಸೂಚಿಯನ್ನು ಜಾರಿಗೊಳಿಸುವ ಜವಾಬ್ದಾರಿ ಕ್ಲಾಸ್ ಒನ್ ಗಜೆಟೆಡ್ ಅಧಿಕಾರಿಯದ್ದು" ಎಂದು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
"ಯಾವುದೇ ಕಾರಣಕ್ಕೂ ಉತ್ತರಪ್ರದೇಶದಲ್ಲಿ ಫಲಿತಾಂಶದ ಬಳಿಕ ವಿಜಯೋತ್ಸವ ಆಚರಿಸಲು ಅನುಮತಿ ಇಲ್ಲ" ಸುಪ್ರೀಂ ಕೋರ್ಟ್ ತಿಳಿಸಿದೆ.
"ಎಲ್ಲಾ ಮತ ಎಣಿಕೆಯ ಕೇಂದ್ರದ ಪ್ರಕ್ರಿಯೆಗಳನ್ನು ಸಿಸಿಟಿವಿ ರೆಕಾರ್ಡಿಂಗ್ ಮಾಡಬೇಕು" ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದೆ.