ಮುಂಬೈ, ಮೇ. 01 (DaijiworldNews/HR): "ಮಹಾರಾಷ್ಟ್ರ ಸರ್ಕಾರ ಲಾಕ್ಡೌನ್ ತರಹದ ನಿರ್ಬಂಧಗಳನ್ನು ವಿಧಿಸದಿದ್ದರೆ ಒಂಬತ್ತರಿಂದ ಹತ್ತು ಲಕ್ಷ ಸಕ್ರಿಯ ಕೊರೊನಾ ಪ್ರಕರಣಗಳನ್ನು ಕಾಣುತ್ತಿತ್ತು" ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಇತ್ತೀಚಿಗೆ ಹೇರಿರುವ ನಿರ್ಬಂಧಗಳು ಕೊರೊನ ವೈರಸ್ ಪ್ರಕರಣಗಳ ದೈನಂದಿನ ಏರಿಕೆ ತಡೆ ಮತ್ತು ಸಕ್ರಿಯ ಪ್ರಕರಣಗಳು ಈಗ ಸುಮಾರು 6.5 ಲಕ್ಷಕ್ಕೆ ಸ್ಥಿರವಾಗಿರಲು ನೆರವಾಗಿದೆ" ಎಂದರು.
ಇನ್ನು "ನಾವು ಕಳೆದ ವರ್ಷ ಮಾಡಿದಂತೆ ಕೊರೊನಾ ಅಲೆಯನ್ನು ಎದುರಿಸಲು ಒಟ್ಟಿಗೆ ಹೋರಾಡುತ್ತೇವೆ, 18 ರಿಂದ 44ರ ವಯೋಮಾನದವರಿಗೆ ಚುಚ್ಚುಮದ್ದಿಗೆ ಅಗತ್ಯವಿರುವ 12 ಕೋಟಿ ಡೋಸ್ಗಳನ್ನು ಸಂಗ್ರಹಿಸಲು ರಾಜ್ಯವು ಒಂದೇ ಬಾರಿಗೆ ಚೆಕ್ ಮೂಲಕ ಪಾವತಿ ಮಾಡುತ್ತದೆ" ಎಂದಿದ್ದಾರೆ.