ಮದ್ಯಪ್ರದೇಶ, ಮೇ. 01 (DaijiworldNews/HR): ಎರಡು ಲಕ್ಷಕ್ಕೂ ಅಧಿಕ ಕೊರೊನಾ ಲಸಿಕೆಗಳನ್ನು ಸಾಗಿಸುತ್ತಿದ್ದ ಟ್ರಕ್ವೊಂದು ರಸ್ತೆ ಬದಿಯಲ್ಲಿ ಬಿಟ್ಟುಹೋಗಿರುವುದು ಮಧ್ಯಪ್ರದೇಶದ ನರಸಿಂಗ್ ಪುರ ಜಿಲ್ಲೆಯ ಕರೇಲಿ ಬಸ್ ನಿಲ್ದಾಣದ ಬಳಿ ಶನಿವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ಬದಿಯಲ್ಲಿ ಬಹಳ ಸಮಯದಿಂದ ಟ್ರಕ್ ಉಳಿದಿದೆ ಎಂದು ಕರೇಲಿ ಪೊಲೀಸರಿಗೆ ಮಾಹಿತಿ ಬಂದಿತ್ತು, ಟ್ರಕ್ನ ಚಾಲಕ ಮತ್ತು ಕಂಡಕ್ಟರ್ ಕಾಣೆಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಬಳಿಕ ಕರೇಲಿ ಪೊಲೀಸರು ಸ್ಥಳಕ್ಕೆ ದೌಢಯಿಸಿ ಟ್ರಕ್ ಅನ್ನು ಪರಿಶೀಲಿಸುವಾಗ, ಭಾರತ್ ಬಯೋಟೆಕ್ ನ ಕೊವಾಕ್ಸಿನ್ ನ 2,40,000 ಡೋಸ್ ಗಳನ್ನು ಕಂಡುಬಂದಿದೆ.
ಇನ್ನು ಈ ಲಸಿಕೆಗಳ ಅಂದಾಜು ವೆಚ್ಚ ಸುಮಾರು 8 ಕೋಟಿ ರೂ. ಎಂದು ಹೇಳಲಾಗಿದ್ದು, ಪೊಲೀಸರು ಚಾಲಕನ ಮೊಬೈಲ್ ಸ್ಥಳವನ್ನು ಪತ್ತೆ ಮಾಡಿದಾಗ, ಅವನ ಫೋನ್ ಹೆದ್ದಾರಿ ಬಳಿಯ ಪೊದೆಗಳಲ್ಲಿ ಕಂಡುಬಂದಿದೆ.
ನಾವು ಟ್ರಕ್ ಚಾಲಕ ಮತ್ತು ಕಂಡಕ್ಟರ್ ಅನ್ನು ಹುಡುಕುತ್ತಿದ್ದು, ಸದ್ಯಕ್ಕೆ ಪತ್ತೆಯಾಗಲಿಲ್ಲ ಎಂದು ಕರೇಲಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಶಿಶ್ ಬೊಪಾಚೆ ತಿಳಿಸಿದ್ದಾರೆ.