ನವದೆಹಲಿ, ಮೇ 01 (DaijiworldNews/MB) : ಕೊರೊನಾ ಸೋಂಕು ತಗುಲಿದ್ದ ಸಿತಾರ್ ವಾದಕ ಪಂಡಿತ್ ದೇವವ್ರತ ಚೌಧರಿ (85) ಅವರಿಗೆ ಹೃದಯಾಘಾತವಾಗಿ ದೆಹಲಿಯ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ.
ಈ ಬಗ್ಗೆ ಅವರ ಪುತ್ರ ಪ್ರತೀಕ್ ಚೌಧರಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ''ನನ್ನ ತಂದೆ ಪಂಡಿತ್ ದೇವು ಚೌಧರಿ ಅವರು ನಿಧನರಾದರು. ಕೊರೊನಾ ತಗುಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಮರೆಗುಳಿತನದ ತೊಂದರೆಯೂ ಇತ್ತು. ಶುಕ್ರವಾರ ಮಧ್ಯರಾತ್ರಿ ಅವರನ್ನು ಐಸಿಯುನ ವೆಂಟಿಲೇಟರ್ನಲ್ಲಿ ಇರಿಸಲಾಗಿದ್ದು ಆ ನಂತರ ಅವರಿಗೆ ಹೃದಯಾಘಾತ ಸಂಭವಿಸಿದೆ. ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ'' ಎಂದು ತಿಳಿಸಿದ್ದಾರೆ.
ದೇವು ಚೌಧರಿ ಎಂದೇ ಖ್ಯಾತರಾಗಿದ್ದ ಅವರು ಸಂಗೀತ ಕ್ಷೇತ್ರಕ್ಕಾಗಿ ನೀಡಿದ್ದ ಕೊಡುಗೆಗಾಗಿ ಪದ್ಮಭೂಷಣ, ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಚೌಧರಿ ಅವರು ಆರು ದಶಕಗಳ ಕಾಲ ವಿಶ್ವದಾದ್ಯಂತ ಪ್ರದರ್ಶನ ನೀಡಿದ್ದಾರೆ. ಅವರು ಶಿಕ್ಷಣ ತಜ್ಞರು ಹಾಗೂ ಲೇಖಕರೂ ಕೂಡಾ ಹೌದು.