ಹುಬ್ಬಳ್ಳಿ, ಮೇ.01 (DaijiworldNews/PY): "ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸುವಂತೆ ಕೊರೊನಾ ಸೋಂಕಿತರಿಗೆ ಹಾಗೂ ಅವರು ಕುಟುಂಬಕ್ಕೆ ಒತ್ತಡ ಹೇರಿ, ಅಸಹಾಯಕತೆ ದುರುಪಯೋಗ ಮಾಡಿಕೊಂಡು ಹಾಗೂ ವೈದ್ಯ ವೃತ್ತಿಗೆ ಕಪ್ಪುಚುಕ್ಕಿ ತರಬಾರದು" ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ.
ನೋಡೆಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, "ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ಮಂದಿ ನೇರವಾಗಿ ಆಸ್ಪತ್ರೆಗೆ ದಾಖಲಾಗಿ ವೆಚ್ಚ ಭರಿಸಲಾಗದೇ ಕಷ್ಟಪಡುತ್ತಿದ್ದಾರೆ. ಹಾಗಾಗಿ ಅಂತವರ ನೆರವಿಗಾಗಿ ಸರ್ಕಾರ ಉಚಿತ ಚಿಕಿತ್ಸೆ ಹಾಗೂ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿರುವ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸುವಂತರ ಕೊರೊನಾ ಸೋಂಕಿತರಿಗೆ ಒತ್ತಡ ಹೇರುತ್ತಿದೆ" ಎಂದಿದ್ದಾರೆ.
"ಕೊರೊನಾದ ಈ ಬಿಕ್ಕಟ್ಟಿನ ಸಂದರ್ಭ ವೈದ್ಯರು ಬಡವರಿಗೆ, ಅಸಹಾಯಕರಿಗೆ ನೆರವಾಗಿ ತಮ್ಮ ಕಾರ್ಯವನ್ನು ನಿರ್ವಹಿಸಬೇಕು. ಸರ್ಕಾರ ತೆಗೆದುಕೊಂಡಿರುವ ಕ್ರಮಗಳಿಗೆ ಸಹಕರಿಸಬೇಕು" ಎಂದು ಹೇಳಿದ್ದಾರೆ.