ಕಲಬುರಗಿ, ಮೇ. 01 (DaijiworldNews/HR): "ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲಿ ಪರಿಸ್ಥಿತಿ ಹತೋಟಿಗೆ ಬರದಿದ್ದಲ್ಲಿ ಜನತೆ ಸ್ವನಿಯಂತ್ರಣವಾಗಿ ಮನೆಯಲ್ಲಿ ಇರದೇ ಹೋದರೆ ರಾಜ್ಯವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು" ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಹೇಳಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಅವರು, "ರಾಜ್ಯದಲ್ಲಿ ಸದ್ಯದಲ್ಲಿ 18ರಿಂದ 44 ವಯಸ್ಸಿನವರಿಗೆ ಇಂದಿನಿಂದ ಕೊರೊನಾ ಲಸಿಕೆ ನೀಡಲಾಗುವುದು ಎಂದು ಹೇಳಿದ್ದು, ಸದ್ಯ ಈ ವಯಸ್ಸಿನವರಿಗೆ ಲಸಿಕೆ ನೀಡುವುದರಲ್ಲಿ ದಾಸ್ತಾನು ಕೊರತೆ ಇದೆ ಹಾಗಾಗಿ ಇನ್ನೂ ಅಧಿಕೃತವಾಗಿ ರಾಜ್ಯದಲ್ಲಿ ಲಸಿಕೆಯನ್ನು ಇಂದು ನೀಡಲಾಗುತ್ತಿಲ್ಲ" ಎಂದರು.
ಇನ್ನು ಪ್ರಾಯೋಗಿಕವಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯ್ಯೂರಪ್ಪನವರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ 18ರಿಂದ 44 ವಯಸ್ಸಿನವರಿಗೆ ನೀಡುವ ಲಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ರಾಜ್ಯಕ್ಕೆ ಬೇಕಾಗಿರುವ ಅಗತ್ಯ ಲಸಿಕೆ ದಾಸ್ತಾನು ಬಂದ ಕೂಡಲೇ ಈ ಬಗ್ಗೆ ಮಾಹಿತಿ ನೀಡಲಾಗುವುದು" ಎಂದಿದ್ದಾರೆ.