ನವದೆಹಲಿ, ಮೇ.01 (DaijiworldNews/PY): ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕೊರೊನಾ ಸೋಂಕಿತರಿಗೆ ಅಗತ್ಯತೆ ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸಶಸ್ತ್ರ ಪಡೆಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿಶೇಷ ಅಧಿಕಾರವನ್ನು ನೀಡಿದ್ದಾರೆ.
"ಕಾನೂನಿನಲ್ಲಿ ವಿಶೇಷ ಅಧಿಕಾರ ನೀಡುವ ಅವಕಾಶ ಇದೆ. ಕೊರೊನಾ ವಿರುದ್ದದ ಹೋರಾಟದಲ್ಲಿ ದೇಶದ ಜನರಿಗೆ ಭಾರತೀಯ ಸೇನಾ ಪಡೆಗಳು ಅಗತ್ಯವಾದ ಸಹಾಯ ಮಾಡಲು ಇದು ನೆರವಾಗಲಿದೆ" ಎಂದು ತಿಳಿಸಿದ್ದಾರೆ.
"ಜನರ ಅಗತ್ಯತೆಗಳನ್ನು ಪೂರೈಕೆ ಮಾಡಲು ಆಸ್ಪತ್ರೆಗಳ ನಿರ್ಮಾಣ, ಕ್ವಾರಂಟೈನ್ ಕೇಂದ್ರಗಳ ಸ್ಥಾಪನೆ, ವೈದ್ಯಕೀಯ ಸಾಧನೆಗಳ ಖರೀದಿಗಾಗಿ 50 ಲಕ್ಷ. ರೂ. ವರೆಗೆ ಕಮಾಂಡರ್ ವೆಚ್ಚ ಮಾಡಬಹುದು. ಕೊರೊನಾ ನೆರವಿಗಾಗಿ ವಿಭಾಗೀಯ ಕಮಾಂಡರ್ಗಳು ಹಾಗೂ ತತ್ಸಮಾನ ಹುದ್ದೆಯವರು 20 ಲಕ್ಷ. ರೂ.ವರೆಗೆ ಖರ್ಚ ಮಾಡುವ ಅಧಿಕಾರ ನೀಡಿದ್ದೇವೆ" ಎಂದು ಹೇಳಿದ್ದಾರೆ.
"ಈ ವಿಶೇಷ ಅಧಿಕಾರವು 2021ರ ಜುಲೈ ತಿಂಗಳವರೆಗೆ ಮಾತ್ರವೇ ಜಾರಿಯಲ್ಲಿರಲ್ಲಿದ್ದು, ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಮುಂದುವರಿಸುವ ತೀರ್ಮಾನ ಮಾಡಲಾಗುವುದು" ಎಂದು ತಿಳಿಸಿದ್ದಾರೆ.