ನವದೆಹಲಿ, ಎ.30 (DaijiworldNews/PY): "ಮೇ 1ರಿಂದ ಕೊರೊನಾ ಲಸಿಕೆಗೆ ಅರ್ಹರಾದ 18-44 ವರ್ಷದೊಳಗಿನ ಜನರು ಖಾಸಗಿ ಕೇಂದ್ರಗಳಲ್ಲಿ ತಮ್ಮ ಆದ್ಯತೆಯ ಲಸಿಕೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಸಾರ್ವಜನಿಕರ ಆಯ್ಕೆಗೆ ಬಿಡಲಾಗಿದೆ" ಎಂದು ಕೊರೊನಾ ವ್ಯಾಕ್ಸಿನೇಷನ್ ಸಬಲೀಕರಣ ಸಮಿತಿಯ ಅಧ್ಯಕ್ಷ ಆರ್. ಎಸ್ ಶರ್ಮಾ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರದ ಪ್ರಾಯೋಜಿತ ಚಾಲನೆಯಲ್ಲಿ ಎಪ್ರಿಲ್ 30ರವರೆಗೆ ಆರೋಗ್ಯ ರಕ್ಷಣೆ ಹಾಗೂ ಮುಂಚೂಣಿ ಕಾರ್ಯಕರ್ತರು ಸೇರಿದಂತೆ 45 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಲಸಿಕೆ ಪಡೆಯುಲು ಅರ್ಹರಾಗಿದ್ದರು. ಫಲಾನುಭವಿಗಳಿಗೆ, ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಹಾಗೂ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ನಡುವೆ ಆಯ್ಕೆ ಮಾಡಲು ಅವಕಾಶವಿರಲಿಲ್ಲ" ಕೋವಿನ್ ಪ್ಲಾಟ್ಫಾರ್ಮ್ನ ಮುಖ್ಯಸ್ಥ ಶರ್ಮಾ ಹೇಳಿದ್ದಾರೆ.
"ಫಲಾನುಭವಿಗಳಿಗೆ ಸರ್ಕಾರಿ ಕೇಂದ್ರಗಳು ಲಸಿಕೆ ನೀಡುವುದನ್ನು ಮುಂದುವರಿಸುತ್ತವೆ. ಎರಡನೇ ಡೋಸ್ ನೀಡುತ್ತಿದ್ದರೆ, ಮೊದಲು ಪಡೆದುಕೊಂಡ ಡೋಸ್ ಲಸಿಕೆಯನ್ನೇ ಎರಡನೇ ಬಾರಿಗೆ ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಯಾವ ಲಸಿಕೆಗಳನ್ನು ಖಾಸಗಿ ಕೇಂದ್ರಗಳು ಬಳಸುತ್ತಿವೆ ಹಾಗೂ ಆ ಲಸಿಕೆಗಳ ಬೆಲೆ ಎಷ್ಟು ಎನ್ನುವುದನ್ನು ಘೋಷಣೆ ಮಾಡುತ್ತವೆ" ತಿಳಿಸಿದ್ದಾರೆ.
"ಖಾಸಗಿ ಕೇಂದ್ರಗಳಲ್ಲಿ ಕೋವಿಲ್ ಪೋರ್ಟಲ್ ಬೆಲೆ ಹಾಗೂ ಲಸಿಕೆಗಳ ಪ್ರಕಾರಗಳನ್ನು ತೋರಿಸಲು ಸಾಧ್ಯ. ತಮಗೆ ಬೇಕಾದ ಲಸಿಕೆಗಳನ್ನು ಫಲಾನುಭವಿಗಳಿಗೆ ಆಯ್ಕೆ ಮಾಡಿಕೊಳ್ಳಲು ಇದು ನೆರವಾಗುತ್ತದೆ" ಎಂದಿದ್ದಾರೆ.