ನವದೆಹಲಿ, ಏ 30(DaijiworldNews/MS): ಕೋವಿಡ್-19 ಇಂಜೆಕ್ಷನ್ ರೆಮಿಡಿಸಿವಿರ್ ನ ಲಕ್ಷಾಂತರ ಬಾಟಲಿಗಳನ್ನು ಭಾರತ ರಫ್ತು ಮಾಡಿರಬಹುದು. ಆದರೆ, ತನ್ನ ಸ್ವಂತ ದೇಶದ ಜನರು ಈ ಇಂಜೆಕ್ಷನ್ ಕೊರತೆಯಿಂದ ತೊಂದರೆ ಅನುಭವಿಸುವಂತಾಗಿದೆ. ಇದೀಗ ಈ ತೊಂದರೆ ನೀಗಿಸಲು ಭಾರತವೂ ಇತರ ದೇಶಗಳಿಂದ ಈ ಔಷಧವನ್ನು ಆಮದು ಮಾಡಿಕೊಳ್ಳಲಾರಂಭಿಸಿದೆ. ಇದರೊಂದಿಗೆ ದೇಶದಲ್ಲಿ ರೆಮಿಡಿಸಿವಿರ್ ನ ಉತ್ಪಾದನಾ ಸಾಮರ್ಥ್ಯವನ್ನು ಸರ್ಕಾರ ಹೆಚ್ಚಿಸಿದೆ.
ಸದ್ಯ ಭಾರತ ಸರ್ಕಾರ, ರೆಮಿಡಿಸಿವಿರ್ ರಫ್ತನ್ನು ನಿಷೇಧಿಸಿದ್ದು, ದೇಶದಲ್ಲಿ ರೆಮಿಡಿಸಿವಿರ್ ನ ಉತ್ಪಾದನಾ ಸಾಮರ್ಥ್ಯವನ್ನು ಸರ್ಕಾರ ಹೆಚ್ಚಿಸಿದೆ. ಪರವಾನಿಗೆ ಹೊಂದಿದ ನಾಲ್ಕು ಸಂಸ್ಥೆಗಳಿಂದ ತಿಂಗಳಿಗೆ ಒಂದು ಕೋಟಿ ವಿಯೆಲ್ ಉತ್ಪಾದನೆಯಾಗುತ್ತಿದೆ.
ಅಮೆರಿಕ ಮತ್ತು ಈಜಿಪ್ಟ್ ನ ಕಂಪೆನಿಗಳಿಗೆ ಸರ್ಕಾರಿ ಸ್ವಾಮ್ಯದ ಎಚ್ಎಲ್ಎಲ್ ಲೈಫ್ ಕೇರ್ ಸಂಸ್ಥೆ, ರೆಮಿಡ್ ಸಿವಿರ್ ನ 4 ಲಕ್ಷ 50 ಸಾವಿರ ವಯೆಲ್ ಗಳಿಗೆ ಬೇಡಿಕೆ ಇಟ್ಟಿದ್ದು ಮೊದಲ ಹಂತವಾಗಿ 75 ಸಾವಿರ ವಯೆಲ್ ಗಳು ಶುಕ್ರವಾರ ಭಾರತಕ್ಕೆ ಬಂದಿದೆ.
ಇದರೊಂದಿಗೆ ಇನ್ನೆರಡು ದಿನಗಳಲ್ಲಿ ಅಮೆರಿಕದ ಗಿಲೀಡ್ ಸೈನ್ಸನ್ಸ್ ಸಂಸ್ಥೆಯೂ ಅಂದಾಜು ಒಂದು ಲಕ್ಷ ವಯೆಲ್ ಗಳನ್ನು ಪೂರೈಸುವ ನಿರೀಕ್ಷೆ ಇದೆ. ಇದಲ್ಲದೆ ಮತ್ತೆ ೧೫ ದಿನಗಳೊಳಗೆ ಒಂದು ಲಕ್ಷ ವೆಯಲ್ ಗಳನ್ನು ಪೂರೈಸಲಿದೆ. ಈಜಿಪ್ಟ್ ನ ಇವಿಎ ಫಾರ್ಮಾ, ಪ್ರಾಥಮಿಕವಾಗಿ 10 ಸಾವಿರ ಆ ಬಳಿಕ 15 ದಿನಗಳಿಗಳಂತೆ 50 ಸಾವಿರ ವಯೆಲ್ ಗಳನ್ನು ಕಳುಹಿಸಲಿದೆ.