ನವದೆಹಲಿ, ಏ.30 (DaijiworldNews/HR): ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಜನರಲ್ ಅನಿಲ್ ಬೈಜಲ್ ಅವರಿಗೆ ಇಂದು ಕೊರೊನಾ ಸೋಂಕು ದೃಢಪ ಶುಕ್ರವಾರ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, ನನಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸ್ವಲ್ಪ ರೋಗಲಕ್ಷಣಗಳಿವೆ ಹಾಗಾಗಿ ಐಸೋಲೇಷನ್ ಆಗಿದ್ದೇನೆ" ಎಂದರು.
ಇನ್ನು "ನಾನು ಮನೆಯಿಂದಲೇ ಕಾರ್ಯನಿರ್ವಹಿಸಲಿದ್ದು, ದೆಹಲಿಯ ಪರಿಸ್ಥಿತಿ ಕುರಿತು ಮೇಲ್ವಿಚಾರಣೆ ಮಾಡಲಾಗುವುದು, ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ" ಎಂದು ಮನವಿ ಮಾಡಿಕೊಂಡಿದ್ದಾರೆ.