ಆಗ್ರಾ, ಏ.30 (DaijiworldNews/HR): ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ತನ್ನ ತಾಯಿಗೆ ಆಕ್ಸಿಜನ್ ಸಿಲೆಂಡರ್ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಯುವಕನಿಂದ ಸಿಲೆಂಡರ್ ಕಸಿದುಕೊಂಡ ಆರೋಪದಲ್ಲಿ ಪೊಲೀಸರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ಆಕ್ಸಿಜನ್ ಸಿಲೆಂಡರ್ ಅನ್ನು ಒತ್ತಾಯಪೂರ್ವಕವಾಗಿ ಯುವಕನಿಂದ ಪೊಲೀಸರು ಕಸಿದುಕೊಂಡಿದ್ದು, ಪಿಪಿಇ ಕಿಟ್ ಧರಿಸಿದ್ದ ಯುವಕ ಪೊಲೀಸ್ ಅಧಿಕಾರಿಗೆ ಆಕ್ಸಿಜನ್ ಸಿಲೆಂಡರ್ ನೀಡುವಂತೆ ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
ನನ್ನ ತಾಯಿಗೆ ಆಕ್ಸಿಜನ್ ಸಿಗದೇ ಇದ್ದರೆ ಸಾಯುತ್ತಾರೆಂದು ಯುವಕ ಮನವಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಇನ್ನು ಕೊನೆಗೂ ಆಕ್ಸಿಜನ್ ಸಿಗದೇ ಯುವಕನ ತಾಯಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಯುವಕ ಅಂಶ್ ಗೋಯಲ್ ಸುಸ್ಸಿಗಾರರೊಂದಿಗೆ ಮಾತನಾಡಿದ್ದು, "ವಿಐಪಿ ರೋಗಿಗಾಗಿ ನನ್ನ ಕೈಯಲ್ಲಿದ್ದ ಸಿಲೆಂಡರ್ ಅನ್ನು ಪೊಲೀಸರು ಕಸಿದುಕೊಂಡು ಹೋದರು. ನಮ್ಮ ತಾಯಿಗೆ ಆಕ್ಸಿಜನ್ ಲಭ್ಯವಾಗದೇ ಸಾವನ್ನಪ್ಪಿದ್ದಾರೆ" ಎಂದು ಹೇಳಿದ್ದಾರೆ.