ಕೋಲ್ಕತ್ತಾ, ಏ 30(DaijiworldNews/MS): ಪಶ್ವಿಮ ಬಂಗಾಳದ ವಿಧಾನಸಭೆಯ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆಲ್ಲಲಿದ್ದು, "ವೀಲ್ ಚೇರ್ ನಿಂದ ದೀದಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಅಸೀನರಾಗಲಿದ್ದಾರೆ" ಎಂದು ತೃಣಮೂಲ ಕಾಂಗ್ರೆಸ್ ಗುರುವಾರ ವಿಶ್ವಾಸ ವ್ಯಕ್ತಪಡಿಸಿದೆ.
"ಬಿಜೆಪಿಯೂ ಚುನಾವಣೆಯಲ್ಲಿ ತನ್ನೆಲ್ಲಾ ಹೊಲಸು ತಂತ್ರಗಳನ್ನು ಬಳಸಿದರೂ ಈ ಬಾರಿ, ಬಂಗಾಳದಲ್ಲಿ ಟಿಎಂಸಿ ಗೆಲ್ಲಲಿದ್ದು ಮಮತಾ ಬ್ಯಾನರ್ಜಿ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಟಿಎಂಸಿ ಸಂಸದ ಡೆರೆಕ್ ಒ'ಬ್ರಿಯೆನ್ ಹೇಳಿದ್ದಾರೆ.
ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರಳ ಬಹುಮತ ಪಡೆಯುವ ಸಾಧ್ಯತೆ ಕಂಡುಬಂದಿದೆ. ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಈ ಬಾರಿ ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಸಿಗುವುದು ಕಷ್ಟವಾಗಲಿದೆ.
ಇನ್ನು ಚುನಾವಣಾ ಫಲಿತಾಂಶಕ್ಕೆ ಎರಡು ದಿನ ಬಾಕಿ ಇರುವಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಪಕ್ಷದ ಎಲ್ಲಾ ನಾಯಕರು, ಅಭ್ಯರ್ಥಿಗಳು ಹಾಗೂ ಅವರ ಚುನಾವಣಾ ಏಜೆಂಟಗಳೊಂದಿಗೆ ಇಂದು ಮಧ್ಯಾಹ್ನ 3 ಗಂಟೆಗೆ ವೇಳೆಗೆ ವರ್ಚುಲ್ ಸಭೆ ನಡೆಸುವ ಸಾಧ್ಯತೆ ಇದೆ.
"ಮತಗಟ್ಟೆ ಸಮೀಕ್ಷೆಗಳ ಹೇಳುವುದಕ್ಕಿಂತ ಅತಿ ಹೆಚ್ಚಿನ ಸೀಟುಗಳನು ನಮ್ಮ ಪಕ್ಷವು ಪಡೆಯುತ್ತದೆ , ಬಂಗಾಳದಲ್ಲಿ 21 ಚುನಾವಣಾ ಸಭೆಗಳನ್ನು ನಡೆಸಿದ ಬಿಜೆಪಿ ಸೋಲುತ್ತದೆ ಹಾಗೂ ಪ್ರಧಾನಿ ನರೇಂದ್ರ ಮೋದಿ 200 ಕ್ಕಿಂತ ಹೆಚ್ಚು ಸ್ಥಾನವನ್ನು ಬಿಜೆಪಿ ಗಳಿಸುತ್ತದೆ ಎಂದ ಮಾತುಗಳನ್ನು ಸುಳ್ಳಾಗಿಸುತ್ತದೆ " ಎಂದು ಟಿಎಂಸಿ ಸಂಸದ ಸೌಗತಾ ರಾಯ್ ಅಭಿಪ್ರಾಯಪಟ್ಟಿದ್ದಾರೆ.