ಚೆನೈ, ಏ 29(DaijiworldNews/MS): ಕೋವಿಡ್ -19 ಲಸಿಕೆ ವಿರುದ್ಧ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಬಂಧನಕ್ಕೊಳಗಾದ ನಟ ಮನ್ಸೂರ್ ಅಲಿ ಖಾನ್ ಅವರಿಗೆ ಮದ್ರಾಸ್ ಹೈಕೋರ್ಟ್ ಗುರುವಾರ ಷರತ್ತು ಬದ್ದ ಜಾಮೀನು ನೀಡಿದೆ.
ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಂ.ದಂಢಪಾಣಿ ಜಾಮೀನು ನೀಡುವ ವೇಳೆ " ಕೋವಿಶೀಲ್ಡ್ ಖರೀದಿಸಲು ತಮಿಳುನಾಡು ಆರೋಗ್ಯ ಕಾರ್ಯದರ್ಶಿಗೆ 2 ಲಕ್ಷ ರೂಪಾಯಿ ಪಾವತಿಸುವಂತೆ " ನಟ ಮನ್ಸೂರ್ ಅಲಿ ಖಾನ್'ಗೆ ನಿರ್ದೇಶನ ನೀಡಿದ್ದಾರೆ
ಏಪ್ರಿಲ್ 16 ರಂದು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆ ನಟ ವಿವೇಕ್ ಅವರು ದಾಖಲಾದ ಸಂದರ್ಭದಲ್ಲಿ, ನಟ ಮನ್ಸೂರ್ ಅಲಿ ಖಾನ್ ಗೆ, "ಏಪ್ರಿಲ್ 15 ರಂದು ತೆಗೆದುಕೊಂಡ ಕೋವಿಡ್ -19 ಲಸಿಕೆಯಿಂದಾಗಿ ವಿವೇಕ್ ಅವರಿಗೆ ಹೃದಯಾಘಾತವಾಗಿದೆ" ಎಂದು ಆರೋಪಿಸಿ ಹೇಳಿಕೆ ನೀಡಿದ್ದರು. ನಟ ಹೇಳಿಕೆಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು
ಈ ಘಟನೆಯ ಬೆನ್ನಲ್ಲೇ ಚೆನ್ನೈ ಕಾರ್ಪೊರೇಶನ್ನ ಆರೋಗ್ಯ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ವಡಪಲಾನಿ ಪೊಲೀಸರು ಭಾರತೀಯ ದಂಡ ಸಂಹಿತೆ, 153, 270 505 (1) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಭಾವನಾತ್ಮಕ ಉತ್ತೇಜನದಿಂದ ಖಾಸಗಿ ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಈ ಹೇಳಿಕೆ ನೀಡಿದ್ದೇನೆ ಹೊರತು ಬೇರೆಯಾವ ಉದ್ದೇಶವೂ ಇರಲಿಲ್ಲ ಎಂದು ನಟ ಮನ್ಸೂರ್ ಅಲಿ ಖಾನ್ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ