ನವದೆಹಲಿ, ಏ 29(DaijiworldNews/MS): ಕಳೆದ 24 ಗಂಟೆಗಳಲ್ಲಿ ಭಾರತವು ಕೊರೊನಾ ಸಾಂಕ್ರಮಿಕ ರೋಗದಿಂದ ಸಾವಿನ ಸಂಖ್ಯೆಯಲ್ಲಿ ದಾಖಲೆಯ ಏರಿಕೆಯನ್ನುದಾಖಲಿಸಿದ್ದು, ದೇಶದಲ್ಲಿ ಸೋಂಕಿನಿಂದ ಸಾಂಭವಿಸಿದ ಒಟ್ಟು ಸಾವು ನೋವು 200,000 ದಾಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ3,79,257 ಹೊಸ ಕರೋನ ಪ್ರಕರಣಗಳು, ಧೃಡಪಟ್ಟಿದ್ದು, ಇದೇ ವೇಳೆಯಲ್ಲಿ 3645 ಮಂದಿ ಮೃತಪಟ್ಟಿದ್ದು, ಮತ್ತು ಕರೋನ ಸೊಂಕಿನಿಂದ 1,50,86,878 ಮಂದಿ ಗುಣಮುಖರಾಗಿದ್ದಾರೆ.
ಸುಮಾರು 1.4 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೋವಿಡ್ -19 ಸೋಂಕಿನಿಂದ 2 ಲಕ್ಷಕ್ಕೂ ಅಧಿಕ ಸಾವುಗಳು ಸಂಭವಿಸಿದ್ದು ಇದು ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್ ಮತ್ತು ಮೆಕ್ಸಿಕೊದ ನಂತರ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಏತನ್ಮಧ್ಯೆ, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ನೋಂದಣಿ ಪ್ರಕಿಯೆಯೂ ಬುಧವಾರ ಪ್ರಾರಂಭವಾಯಿತು. 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನೋಂದಣಿ ಪ್ರಾರಂಭಿಸಿದ ಕೆಲವೇ ನಿಮಿಷಗಳಲ್ಲಿ ಭಾರತದ ಕೋವಿಡ್ -19 ವ್ಯಾಕ್ಸಿನೇಷನ್ ಪೋರ್ಟಲ್ ಕೋವಿನ್ ಕ್ರ್ಯಾಶ್ ಆಗಿ ಬಳಿಕ ಸರಿಯಾಯಿತು. ಆರೋಗ್ಯ ಸೇತು ಆ್ಯಪ್ನಲ್ಲಿ ಸಹ ತೊಂದರೆಗಳು ಕಾಣಿಕೊಂಡಿತ್ತು. ದೇಶದಲ್ಲಿ ಈವರೆಗೆ ಒಟ್ಟು ವ್ಯಾಕ್ಸಿನೇಷನ್ ತೆಗೆದುಕೊಂಡರವರ ಸಂಖ್ಯೆ 15,00,20,648 ದಾಟಿದೆ.