ನವದೆಹಲಿ, ಎ.28 (DaijiworldNews/PY): ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ನಡುವೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೊಂದಣಿಯನ್ನು ಸರ್ಕಾರ ಆರಂಭಿಸಿದೆ. ಹಾಗಾಗಿ ನೋಂದಣಿ ಮಾಡಿಸಿಕೊಂಡವರು ಮೇ.1ರಿಂದ ಲಸಿಕೆ ಪಡೆದುಕೊಳ್ಳಲಿದ್ದಾರೆ.
ತಮ್ಮನ್ನು ಹಾಗೂ ತಮ್ಮ ಕುಟುಂಬದ ಸದಸ್ಯರನ್ನು ಕೊರೊನಾ ಲಸಿಕೆಗಾಗಿ ನೋಂದಯಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಸಂಜೆ 4 ಗಂಟೆಯಗೆ ಸರ್ಕಾರದ ಕೋ-ವಿನ್ ಫ್ಲಾಟ್ಫಾರ್ಮ್ ಹಾಗೂ ಆರೋಗ್ಯ ಸೇತು ಅಪ್ಲಿಕೇಶನ್ ಸ್ಕ್ರಾಮ್ ಮಾಡುತ್ತಿದ್ದು, ನೋಂದಣಿ ವೆಬ್ಸೈಟ್ನಲ್ಲಿ ಭಾರೀ ದಟ್ಟಣೆಯಾಗಿರುವ ಕಾರಣ ಜನರು ಸರ್ವರ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಹೆಚ್ಚಿನ ಬಳಕೆದಾರರಿಗೆ ಪೋರ್ಟಲ್ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಕೋ-ವಿನ್ ಫ್ಲಾಟ್ಫಾರ್ಮ್ಗೆ ಲಾಗಿನ್ ಆಗಲು ಬಳಕೆದಾರರು ಸ್ವೀಕರಿಸಿದ ಓಟಿಪಿಯನ್ನು ನಮೂದಿಸಿದ ಸಂದರ್ಭ, ಲಾಗ್ ಇನ್ ಮಾಡುವಲ್ಲಿ ತೊಂದರೆ ಇದೆ ಎನ್ನುವ ಸಂದೇಶ ಕಂಡು ಬರುತ್ತಿದೆ. ಇದಕ್ಕೆ ನಿಖರವಾದ ಕಾರಣ ತಿಳಿದುಬಾರದೇ ಇದ್ದರೂ ವೆಬ್ಸೈಟ್ನಲ್ಲಿ ಭಾರೀ ಕುಸಿತ ಕಂಡು ಬಂದಿದೆ.