ಒಡಿಸ್ಸಾ, ಏ 28 (DaijiworldNews/MS): ಕೊರೊನಾ ಸೋಂಕಿತನಾಗಿ ಆತ ಆಸ್ಪತ್ರೆಗೆ ದಾಖಲಾಗಿ ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತಿದ್ದಾಗಲೂ ಚಾರ್ಟರ್ಡ್ ಅಕೌಂಟ್ (ಸಿಎ) ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವ್ಯಕ್ತಿಯೊಬ್ಬನ ಫೋಟೋ ಬುಧವಾರ ಟ್ವಿಟರ್ನಲ್ಲಿ ವೈರಲ್ ಆಗಿದೆ. ಈ ಪೋಟೋ ನೋಡಿ ಹಲವಾರು ನೆಟ್ಟಿಗರು ಆ ವ್ಯಕ್ತಿಯ ಸಮರ್ಪಣೆಯನ್ನು ಶ್ಲಾಘಿಸಿದ್ದು ವೃತ್ತಿಜೀವನದಲ್ಲಿ ಯಶಸ್ಸನ್ನು ಹಾರೈಸಿದ್ದಾರೆ.
ಈ ಫೋಟೋವನ್ನು 2013 ರ ಬ್ಯಾಚ್ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ವಿಜಯ್ ಕುಲಾಂಗೆ ಪೋಸ್ಟ್ ಮಾಡಿದ್ದಾರೆ. ಒಡಿಶಾದ ಗಂಜಾಂನ ಜಿಲ್ಲಾಧಿಕಾರಿ ಆಗಿರುವ ಕುಲಾಂಗೆ, ಅವರು ಕೋವಿಡ್ -19 ಆಸ್ಪತ್ರೆಗೆ ಭೇಟಿ ನೀಡಿದಾಗ ಕಂಡು ಬಂದ ದೃಶ್ಯವನ್ನು ತಮ್ಮ ವೈಯಕ್ತಿಕ ಟ್ವಿಟ್ಟರ್ ಹ್ಯಾಂಡಲ್ನಿಂದ ಹಂಚಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗದ ನಡುವೆಯೂ ವಿದ್ಯಾರ್ಥಿಯೂ ಅಭೂತಪೂರ್ವ ಸಮರ್ಪಣೆಗೆ ಶ್ಲಾಘಿಸಿದ್ದು ಇದು ನೆಟ್ಟಿಗರ ಮನಗೆದ್ದಿದ್ದು ವೈರಲ್ ಆಗಿದೆ.
ಹಾಸಿಗೆಯಲ್ಲಿ ಹರಡಿರುವ ತನ್ನ ಪುಸ್ತಕಗಳು, ಪ್ರತಿಗಳು ಮತ್ತು ಕ್ಯಾಲ್ಕುಲೇಟರ್ನೊಂದಿಗೆ ಅಭ್ಯಾಸದಲ್ಲಿ ನಿರತನಾಗಿರುವ ವಿದ್ಯಾರ್ಥಿಯ ಈ ಪೋಟೋ ಕೆಳಗೆ "ಯಶಸ್ಸು ಕಾಕತಾಳೀಯವಲ್ಲ ಅದಕ್ಕೆ ಸಮರ್ಪಣೆಯ ಅಗತ್ಯವಿರುತ್ತೆ. ಸಮರ್ಪಣೆಯ ಮೂಲಕ ತಮ್ಮ ನೋವನ್ನು ಮರೆತುಬಿಡಬಹುದು , ಯಶಸ್ಸು ಕೇವಲ ಔಪಚಾರಿಕತೆಯಾಗಿದೆ" ಎಂದು ಜಿಲ್ಲಾಧಿಕಾರಿ ಬರೆದುಕೊಂಡಿದ್ದಾರೆ.