ರಾಯಚೂರು, ಏ.28 (DaijiworldNews/MB) : ನಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕುವುದರಿಂದ ಉಸಿರಾಟದ ಸಮಸ್ಯೆ ಬರುವುದಿಲ್ಲ ಎಂದು ಸುದ್ದಿಯಾಗುತ್ತಿರುವ ನಡುವೆಯೇ ಶಿಕ್ಷಕರೋರ್ವರು ಮೂಗಿಗೆ ನಿಂಬೆ ಹಣ್ಣಿನ ರಸ ಹಾಕಿಕೊಂಡ ಪರಿಣಾಮ ಸಾವನಪ್ಪಿರುವ ಘಟನೆ ಸಿಂಧನೂರು ನಗರದ ನಟರಾಜ ಕಾಲನಿಯಲ್ಲಿ ನಡೆದಿದೆ.
ನಾಲ್ಕು ಹನಿ ನಿಂಬೆ ರಸವನ್ನು ಮೂಗಿನಲ್ಲಿ ಹಾಕಿಕೊಂಡರೇ ಉಸಿರಾಟದ ಸಮಸ್ಯೆ ಬರುವುದಿಲ್ಲ. ಬದಲಿಗೆ ಲಂಗ್ಸ್ನಲ್ಲಿರುವ ಕಫ ಹೊರ ಬಂದು ಆಮ್ಲಜನಕ ಹೆಚ್ಚುತ್ತದೆ ಎಂಬ ಸುದ್ದಿಗೆ ರಾಜ್ಯದಾದ್ಯಂತ ಹಲವಾರು ಮಂದಿ ಪರವಾಗಿ ಹಾಗೂ ವಿರೋಧವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಲ್ಲಿದ್ದಾರೆ.
ಏತನ್ಮಧ್ಯೆ ನಗರದ ಶರಣಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ(43) ಅವರು ತನ್ನ ಮೂಗಿನ ಒಳಗೆ ನಿಂಬೆ ಹಣ್ಣಿನ ರಸವನ್ನು ಮೂಗಿನೊಳಗೆ ಹಾಕಿಕೊಂಡಿದ್ದರು.
ಬೆಳಿಗ್ಗೆ ಆರೋಗ್ಯವಾಗಿಯೇ ಇದ್ದ ಅವರು ನಿಂಬೆ ಹಣ್ಣು ಹಾಕಿಕೊಂಡ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಒದ್ದಾಡಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.