ಜೈಪುರ, ಎ.28 (DaijiworldNews/PY): ವರನೋರ್ವ ತನ್ನ ಮಡದಿಯಾಗುವವಳ ಕನಸನ್ನು ಈಡೇರಿಸುವ ಸಲುವಾಗಿ 7 ಲಕ್ಷ ರೂ. ನೀಡಿ ಚಾಪರ್ ಬುಕ್ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ವರನನ್ನು ಭರತ್ಪುರ ಜಿಲ್ಲೆಯ ವೈರ್ ಸಬ್ಬ್ಲಾಕ್ನ ರಾಯ್ಪುರ ಗ್ರಾಮದ ನಿವಾಸಿ ಸಿಯಾರಾಮ್ ಗುರ್ಜರ್ ಎಂದು ಗುರುತಿಸಲಾಗಿದೆ. ಸಿಯಾರಾಮ್ ತನ್ನ ವಿವಾಹದ ಸಮಾರಂಭದ ಬಳಿಕ ಹೆಲಿಕಾಫ್ಟರ್ನಲ್ಲಿ ವಧುವನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ರೈತನ ಮಗನಾಗಿರುವ ಸಿಯಾರಾಮ್ ಅವರು, ತಮ್ಮ ಸಹೋದರ ಕರ್ತಾರ್ ಇಸಂಗ್ ಹಾಗೂ ಸೋದರ ಮಾವ ರಾಮ್ಪ್ರಸಾದ್ ಅವರ ಜೊತೆ ಚಾಪರ್ಗೆ ಹತ್ತಿದ್ದಾರೆ. ಟೇಕ್-ಆಫ್ ಸಂದರ್ಭ ಹೆಲಿಕಾಫ್ಟರ್ ಅನ್ನು ನೋಡಲು ಜನರ ದಂಡೇ ಸೇರಿತ್ತು. ಕೊರೊನಾ ಹಿನ್ನೆಲೆ, ಮಾರ್ಗಸೂಚಿ ಉಲ್ಲಂಘಿಸದಂತೆ ನೋಡಿಕೊಳ್ಳಲು ಸ್ಥಳದಲ್ಲಿ ಪೊಲೀಸರು ಇದ್ದರು.
ಸಿಯಾರಾಮ್ ಅವರ ಪತ್ನಿ ರಮಾ ಅವರು ತನ್ನ ಪತಿಯ ಜೊತೆ ಹೆಲಿಕಾಫ್ಟರ್ನಲ್ಲಿ ತನ್ನ ಮನೆಗೆ ಪ್ರಯಾಣಿಸಬೇಕು ಎನ್ನುವ ಕನಸು ಹೊಂದಿದ್ದು, ಈ ಹಿನ್ನೆಲೆ ಸಿಯಾರಮ್ ಅವರು 7 ಲಕ್ಷ ರೂ. ನೀಡಿ ಚಾಪರ್ ಬುಕ್ ಮಾಡಿದ್ದರು.