ಶಿವಮೊಗ್ಗ, ಏ.27 (DaijiworldNews/MB) : ''ರೆಮ್ಡೆಸಿವಿರ್ ಪಡೆದರೆ ಸೋಂಕಿತರು ಕೊರೊನಾದಿಂದ ಸಾಯಲ್ಲ ಎಂಬ ಭ್ರಮೆಯಿಂದ ಮೊದಲು ಜನರ ಹೊರ ಬನ್ನಿ'' ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮಂಗಳವಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ''ರೆಮ್ಡೆಸಿವಿರ್ ಪಡೆದವರು ಎಲ್ಲರೂ ಬದುಕುತ್ತಾರೆ ಎಂದು ಏನಿಲ್ಲ. ಸೋಂಕಿತರಿಗೆ ರೆಮ್ಡೆಸಿವಿರ್ ನೀಡಿದರೆ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂಬುದನ್ನು ವೈದ್ಯರು ಸ್ಪಷ್ಟಪಡಿಸಿದ್ದಾರೆ'' ಎಂದು ಹೇಳಿದರು.
''ರೆಮ್ಡೆಸಿವಿರ್ ನೀಡಲೇ ಬೇಕಾಗುತ್ತದೆ ಎಂದಾದ ಸಂದರ್ಭದಲ್ಲಿ ರೆಮ್ಡೆಸಿವಿರ್ ಅನಿವಾರ್ಯವಾಗಿ ನೀಡಬೇಕಾಗುತ್ತದೆ. ಆದರೆ ಅದನ್ನು ತೆಗೆದುಕೊಂಡ ಬಳಿಕ ಜನರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎಂಬ ಭ್ರಮೆಯಿಂದ ಮೊದಲು ಹೊರಬರಬೇಕು'' ಎಂದರು.